ಕೇರಳ ಫಿಲ್ಮ್ ಅವಾರ್ಡ್: 14 ವರ್ಷಗಳ ಬಳಿಕ ಮಮ್ಮುಟ್ಟಿಗೆ ಒಲಿದ ಅತ್ಯುತ್ತಮ ನಟ ಗೌರವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ 53ನೇ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಹಿರಿಯ ಚಿತ್ರನಟ ಮಮ್ಮುಟ್ಟಿ ಅತ್ಯುತ್ತಮ ನಟನ ಪ್ರಶಸ್ತಿ ಪಡೆದರೆ, ವಿನ್ಸಿ ಅಲೋಸಿಯಸ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.‘ನನ್ಪಕಲ್ ನೇರತ್ ಮಯಾಕ್ಕಮ್’ ಚಿತ್ರ(ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನ)ದಲ್ಲಿನ ಜೇಮ್ಸ್ ಮತ್ತು ಸುಂದರಮ್ ಪಾತ್ರದಲ್ಲಿ ಮಿಂಚಿದ ಮಮ್ಮುಟ್ಟಿ ಅವರು ಅತ್ಯುತ್ತಮ ನಟನೆಂದು ಆಯ್ಕೆಯಾಗಿದ್ದಾರೆ.

ಮಮ್ಮುಟ್ಟಿ ಅವರು 1981ರಲ್ಲಿ ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರೆ, ಇದೀಗ ಆರನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಹಾಗೆಯೇ ‘ರೇಖಾ’ಚಿತ್ರದಲ್ಲಿ ತನ್ನ ಪಾತ್ರಕ್ಕಾಗಿ ವಿನ್ಸಿ ಅಲೋಸಿಯಸ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾದರು.ನನ್ಪಕಲ್ ನೇರತ್ ಮಯಕ್ಕಮ್ ಅತ್ಯುತ್ತಮ ಚಿತ್ರವೆಂಬ ಮನ್ನಣೆಗೆ ಪಾತ್ರವಾಗಿದೆ. ಹಾಗೆಯೇ ರತೀಶ್ ನಿರ್ದೇಶನದ ‘ನ್ನಾ ತಾನ್ ಕೇಸ್ ಕೊಡು’ ಚಿತ್ರ ಕೂಡ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ವಿಮರ್ಷೆ ಮತ್ತು ವಾಣಿಜ್ಯ ನೆಲೆಗಳೆರಡಲ್ಲೂ ಯಶಸ್ವಿಯಾಗಿರುವ ಈ ಚಿತ್ರ ಈ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಗರಿಷ್ಠ ಸಂಖ್ಯೆಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಕಮಲ್ ಕೆ.ಎಂ.ಅತ್ಯುತ್ತಮ ಕಥಾ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಚಿತ್ರಕಥೆ (ಒರು ತೆಕ್ಕನ್ ತಲ್ಲು ಕೇಸ್)ಗಾಗಿ ರಾಜೇಶ್ ಕುಮಾರ್ ಆರ್. ಪ್ರಶಸ್ತಿಗೆ ಭಾಜನರಾಗಿದ್ದಾರೆ.ಶ್ರುತಿ ಶರಣ್ಯಂ ವಿಶೇಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ದೇವಿ ವರ್ಮ ಮತ್ತು ಪಿ.ಪಿ.ಕುಂಞಕೃಷ್ಣನ್ ಅವರು ಅತ್ಯುತ್ತಮ ಪೋಷಕ ನಟಿ ಮತ್ತು ನಟ ಪ್ರಶಸ್ತಿ ಪಡೆದಿದ್ದಾರೆ. ‘ಪಾಲೋಟ್ಟಿ 90ಸ್ ಕಿಡ್ಸ್’ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.ಅತ್ಯುತ್ತಮ ಸಂಗೀತ ಸಂಯೋಜನೆ ಪ್ರಶಸ್ತಿ ಎಂ.ಜಯಚಂದ್ರನ್ ಅವರಿಗೆ ಲಭಿಸಿದೆ.ಮಾಸ್ಟರ್ ದಾ ವಿನ್ಸಿ (ಬಾಲಕರ ವಿಭಾಗ), ತನ್ಮಯ ಸೌಲ್ (ಬಾಲಕಿಯರ ವಿಭಾಗ)ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಮಹೇಶ್ ನಾರಾಯಣ್ ಪಾಲಾಗಿದೆ.

ಅತ್ಯುತ್ತಮ ಪುರುಷ ಗಾಯಕರಾಗಿ ಕಪಿಲ್ ಕಪಿಲಾನ್, ಅತ್ಯುತ್ತಮ ಗಾಯಕಿಯಾಗಿ ಮೃದುಲಾ ವಾರಿಯರ್ , ಅತ್ಯುತ್ತಮ ಸಾಹಿತ್ಯಕ್ಕೆ ರಫೀಕ್ ಅಹಮ್ಮದ್, ಅತ್ಯುತ್ತಮ ಸಿನಿಮಾಟೋಗ್ರಫಿಗೆ ಮನೇಶ್ ಮಾಧವನ್, ಚಂದ್ರು ಸೆಲ್ವರಾಜ್, ಅತ್ಯುತ್ತಮ ಸಂಪಾದನೆಗಾಗಿ ನಿಶಾದ್‌ಯೂಸುಫ್ ಪ್ರಶಸ್ತಿ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!