365 ದಿನಗಳಲ್ಲಿ 3,131 ಜೀವಗಳನ್ನು ಉಳಿಸಿದ್ದಾರೆ ಕೇರಳದ ಅಗ್ನಿಶಾಮಕ ಸಿಬ್ಬಂದಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಅಗ್ನಿಶಾಮಕ ಸಿಬ್ಬಂದಿಗಳು 2023ನೇ ಇಸವಿಯಲ್ಲಿ ನಡೆಸಿದ ಕಾರ್ಯಾಚರಣೆಗಳ ಅಂಕಿಅಂಶ ಬಿಡುಗಡೆಯಾಗಿದ್ದು, 365 ದಿನಗಳಲ್ಲಿ ಈ ಸಿಬ್ಬಂದಿಗಳು ಒಟ್ಟು 3131ಜೀವಗಳನ್ನು ಉಳಿಸಿರುವುದಕ್ಕೆ ಈ ಅಂಕಿಆಂಶಗಳು ಬೆಳಕುಚೆಲ್ಲಿವೆ.

ಕಳೆದ ವರ್ಷ ಅಗ್ನಿಶಾಮಕ ರಕ್ಷಣಾ ಪಡೆಗೆ ರಾಜ್ಯದಲ್ಲಿ ಒಟ್ಟು 39,530 ದೂರವಾಣಿ ಕರೆಗಳು ಬಂದಿವೆ. ಈ ಪೈಕಿ 15,156 ಕರೆಗಳು ಬೆಂಕಿ ಅವಘಡಗಳಿಗೆ ಸಂಬಂಧಿಸಿದವು. ಅಪಘಾತಗಳ ಸಹಾಯಕ್ಕಾಗಿ 22,575 ಕರೆ ಸ್ವೀಕರಿಸಲಾಗಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ಸಹಾಯಕ್ಕಾಗಿ 5871, ವಯನಾಡ್ ಜಿಲ್ಲೆಯಲ್ಲಿ ಅಪಘಾತ ಸಂಬಂಧಿ 769, ಎರ್ನಾಕುಳಂ ಜಿಲ್ಲೆಯಲ್ಲಿ ಅಗ್ನಿ ಅವಘಡ ಸಂಬಂಧಿ 1732, ತಿರುವನಂತಪುರಂನಲ್ಲಿ 1706, ತ್ರಿಶೂರ್‌ನಲ್ಲಿ 1669 ಕರೆಗಳನ್ನು ಸ್ವೀಕರಿಸಲಾಗಿದೆ.

ಇನ್ನು ಅಪಘಾತ ಸಂಬಂಧಿ ನೆರವಿನ ಕರೆ ಪೈಕಿ ತಿರುವನಂತಪುರದಿಂದ ಅತೀ ಹೆಚ್ಚು ಕರೆಗಳು ಸ್ವೀಕಾರವಾಗಿದೆ. ಇವುಗಳ ಸಂಖ್ಯೆ 3646. ನಂತರ ಎರ್ನಾಕುಳಂನಿಂದ 3341, ಕೊಲ್ಲಂನಿಂದ 2122 ಕರೆಗಳು ಬಂದಿವೆ.
ಈ ಸಿಬ್ಬಂದಿಗಳು ಕೋಝಿಕ್ಕೋಡ್‌ನಲ್ಲಿ 400, ಎರ್ನಾಕುಳಂನಲ್ಲಿ 352 ಮತ್ತು ಕಣ್ಣೂರಲ್ಲಿ 350 ಜೀವಗಳನ್ನು ಉಳಿಸಿದೆ.

ಇದಲ್ಲದೆ ಸಿಬ್ಬಂದಿಗಳು ಕೊಲ್ಲಂ 3228, ಪತ್ತನಂತಿಟ್ಟ 1525, ಆಲಪ್ಪುಳ 2535, ಕೊಟ್ಟಾಯಂ 2662, ಎರ್ನಾಕುಳಂ 5073, ಇಡುಕ್ಕಿ 1496, ತ್ರಿಶೂರ್ 3161, ಪಾಲಕ್ಕಾಡ್ 3070, ಮಲಪ್ಪುರಂ 1661, ಪಾಲಕ್ಕಾಡ್ 3070, ಮಲಪ್ಪುರಂ 1665, ಕೋಝಿಕ್ಕೋಡ್ 2909, ಕಣ್ಣೂರು 3625, ಕಾಸರಗೋಡು 1941 ಕರೆಗಳನ್ನು ಸ್ವೀಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!