ಹೊಸದಿಗಂತ ಮಡಿಕೇರಿ:
ಕೇರಳದ ವ್ಯಕ್ತಿಯೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕತ್ತು ಕೊಯ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೇರಳದ ಕಣ್ಣಾನೂರಿನ ಭಾಸ್ಕರನ್ ಕೋಲಿ ಎಂಬವರ ಪುತ್ರ ಪ್ರದೀಪ್ ಕೋಲಿ(49) ಎಂಬವರೇ ಕೊಲೆಯಾದವರಾಗಿದ್ದಾರೆ.
ಕೊಡಗಿನ ವೀರಾಜಪೇಟೆ ತಾಲೂಕಿನ ಬಿ. ಶೆಟ್ಟಿಗೇರಿ ವ್ಯಾಪ್ತಿಯ ಕೊಂಗಣದಲ್ಲಿ ಕಾಫಿ ತೋಟ ಹೊಂದಿರುವ ಪ್ರದೀಪ್ ಕೋಲಿ ಕಣ್ಣಾನೂರಿನ ಕೋಲಿಯ ಆಸ್ಪತ್ರೆಯ ಮಾಲಕರೂ ಆಗಿದ್ದಾರೆನ್ನಲಾಗಿದೆ. ಕೊಂಗಣದಲ್ಲಿರುವ ಅವರ ಕಾಫಿ ತೋಟದಲ್ಲಿ ಕತ್ತು ಕೊಯ್ದು ಕೊಲೆಯಾದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಗೋಣಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.