ಕೇರಳ ನಿವೃತ್ತ ಡಿಜಿಪಿ ಶ್ರೀಲೇಖಾ ಬಿಜೆಪಿಗೆ ಸೇರ್ಪಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಕೇಡರ್‌ನ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ, ನಿವೃತ್ತ ಡಿಜಿಪಿ ಆರ್‌.ಶ್ರೀಲೇಖಾ ಬುಧವಾರ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್, ಜಿಲ್ಲಾ ಘಟಕದ ಅಧ್ಯಕ್ಷ ವಿ.ವಿ. ರಾಜೇಶ್‌ ಸಮಕ್ಷಮದಲ್ಲಿ ಸದಸ್ಯತ್ವ ಪಡೆದರು.

ಪ್ರಧಾನಿ ಮೋದಿಯವರ ವರ್ಚಸ್ಸು ಬಿಜೆಪಿ ಸೇರುವಂತೆ ನನ್ನ ಮೇಲೆ ಪ್ರಭಾವ ಬೀರಿದೆ. ಪಕ್ಷದಿಂದ ಏನನ್ನು ಬಯಸಲ್ಲ. ಜನಸೇವೆಗೆ ಸಿಕ್ಕ ಮತ್ತೊಂದು ಅವಕಾಶವಿದು. ಜನರಿಗಾಗಿ ಕೆಲಸ ಮಾಡುವೆ ಎಂದು ಶ್ರೀಲೇಖಾ ಹೇಳಿದರು.

‘ಪೊಲೀಸ್ ಅಧಿಕಾರಿಯಾಗಿ ಕಳಂಕರಹಿತ ದಾಖಲೆ ಹೊಂದಿರುವ ನಿವೃತ್ತ ಡಿಜಿಪಿಯ ಅನುಭವವು ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ. 2026ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ನಾವು ಶ್ರಮಿಸುತ್ತೇವೆ ಎಂದು ಸುರೇಂದ್ರನ್‌ ಹೇಳಿದರು.

1987ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಶ್ರೀಲೇಖಾ, 2020ರಲ್ಲಿ ನಿವೃತ್ತರಾಗುವ ಮುನ್ನ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಪುಸ್ತಕಗಳನ್ನು ಬರೆದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!