ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯ ಸರ್ಕಾರವು 2024-25ನೇ ಹಣಕಾಸು ವರ್ಷದಲ್ಲಿ ರಾಜ್ಯ ಖಜಾನೆ ಮೂಲಕ ಬರೋಬ್ಬರಿ 24 ಸಾವಿರ ಕೋಟಿ ರೂ. ಗಳಿಗೂ ಹೆಚ್ಚಿನ ಹಣಕಾಸು ವಹಿವಾಟು ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ಹಣಕಾಸು ವರ್ಷದ ಕೊನೆಯ ದಿನದಂದು ಅಂಕಿ ಅಂಶ ಪರಿಶೀಲಿಸಲಾಗಿದ್ದು, ಅಂದಾಜಿನ ಪ್ರಕಾರ ಈ ವಹಿವಾಟು 24 ಸಾವಿರ ಕೋಟಿ ರೂ.ಗಳನ್ನೂ ಮೀರುತ್ತದೆ ಎಂದಿದ್ದಾರೆ. ಹಣಕಾಸು ವರ್ಷದ ಕೊನೆಯ ದಿನ ಅವರು ತಿರುವನಂತಪುರಂ ಜಿಲ್ಲಾ ಖಜಾನೆಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸಿದರು.