ಹೊಸದಿಗಂತ ವರದಿ, ಮಡಿಕೇರಿ:
ಸ್ವಾಮೀಜಿಗಳ ವಸ್ತ್ರದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ಟಿಟರ್ ಹಾಗೂ ಫೇಸ್’ಬುಕ್ ಖಾತೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಬೋಪಯ್ಯ” ಸಿದ್ದರಾಮಯ್ಯನವರೇ, ನೀವು ಹಿಂದೂ ಸ್ವಾಮೀಜಿಗಳ ಕುರಿತು ಅವಹೇಳನಕಾರಿ ಮಾತನ್ನೇಕೆ ಆಡುತ್ತೀರಾ? ನಿಮಗೆ ಮೊದಲಿನಿಂದಲೂ ಮುಸಲ್ಮಾನರು ಧರಿಸುವ ಟೋಪಿಯ ಮೇಲಿರುವ ಗೌರವ, ಪ್ರೀತಿ ಸ್ವಾಮೀಜಿಗಳು ಧರಿಸುವ ಪೇಟ
ಹಾಗೂ ಕೇಸರಿ ಶಲ್ಯದ ಮೇಲಿಲ್ಲ ಏಕೆ?”ಎಂದು ಪ್ರಶ್ನಿಸಿದ್ದಾರೆ.