ಹೊಸದಿಗಂತ ವರದಿ, ಹುಬ್ಬಳ್ಳಿ:
ಮಹಿಳೆಯೊಬ್ಬರು ಬನ್ನಿ ಮಹಾಕಾಳಿ ಪೂಜೆ ಸಲ್ಲಿಸಲು ಹೋಗುವಾಗ ಬೈಕ್ ಮೇಲೆ ಬಂದ ದುಷ್ಕರ್ಮಿ ಓರ್ವ ಅವರ ಕೊರಳಲ್ಲಿದ್ದ ೪೦ ಸಾವಿರ ಮೌಲ್ಯ ೧೦ ಗ್ರಾಂ. ಬಂಗಾರ ಮಂಗಳ ಸೂತ್ರ ಕಳ್ಳತನ ಮಾಡಿ ಪರಾರಿಯಾದ ಘಟನೆ ಗೋಕುಲ ರಸ್ತೆ ಡಾಲರ್ಸ್ ಕಾಲೋನಿಯಲ್ಲಿ ಬುಧವಾರ ಬೆಳಿಗ್ಗೆ ೫.೪೫ ಕ್ಕೆ ನಡೆದಿದೆ.
ಇಲ್ಲಿಯ ಕೋಟಿಲಿಂಗೇಶ್ವರ ನಗರದ ಲಲಿತಾ ಪಾಟೀಲ ಎಂಬುವರ ಮಂಗಳ ಸೂತ್ರ ಕಳ್ಳತನವಾಗಿದೆ. ನವರಾತ್ರಿ ಹಬ್ಬ ಆರಂಭವಾಗಿದ್ದು, ಎಂದಿನಂತೆ ಬೆಳಿಗ್ಗೆ ಬನ್ನಿ ಮಹಾಕಾಳಿಗೆ ಲಲಿತಾ ಅವರು ಬೆಳಿಗ್ಗೆ ಪೂಜೆ ಸಲ್ಲಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿ ಓರ್ವ ಅವರ ಹತ್ತಿರ ಬಂದು ಅವರ ಕೊರಳಿನಲ್ಲಿದ್ದ ಮಂಗಲ ಸೂತ್ರ ಕಿತ್ತೊಕೊಂಡು ಎದುರಿಗೆ ನಿಂತಿದ್ದ ದ್ವಿಚಕ್ರವಾಹ ಹತ್ತಿ ಪರಾರಿಯಾಗಿದ್ದಾನೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.