ದಿಗಂತ ವರದಿ ಕಲಬುರಗಿ:
ಜಾನುವಾರುಗಳನ್ನು ಕಳ್ಳತನ ಮಾಡಿ ಹೋಗುತ್ತಿದ್ದ ಖಧೀಮರು ದಾರಿಯಲ್ಲಿ ಜಾನುವಾರುಗಳ ಸಮೇತ ವಾಹನವನ್ನು ಬಿಟ್ಟು ಪರಾರಿಯಾಗಿವು ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವದಲ್ಲಿ ನಡೆದಿದೆ.
ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ರೈತ ಮಾರುತಿ ಎಂಬುವವರಿಗೆ ಸೇರಿರುವ ಜಾನುವಾರು,ಮನೆಯ ಮುಂದೆ ಹಸುಗಳನ್ನು ಕಟ್ಟಿದ್ದರು. ನಸುಕಿನ ಜಾವದಲ್ಲಿ ಬುಲೆರೋ ವಾಹನದಲ್ಲಿ ಕಳ್ಳರು ಜಾನುವಾರುಗಳನ್ನು ತುಂಬಿಕೊಂಡು ಹೋಗುವಾಗ ಗ್ರಾಮದ ರೈತರು ಬೆನ್ನಟ್ಟಿದ್ದಾಗ, ಗಾರಂಪಳ್ಳಿ ಹೂಡದಳ್ಳಿ ರಸ್ತೆಯ ಮಧ್ಯದಲ್ಲಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.
ರಾಜಾಸ್ಥಾನದ ಮೂಲದ ನೋಂದಣಿ ಹೊಂದಿರುವ ಬುಲೆರೋ ವಾಹನದಲ್ಲಿ ಒಟ್ಟು ನಾಲ್ಕು ಜಾನುವಾರುಗಳನ್ನು ಕದ್ದು ಒಯ್ಯುತ್ತಿದ್ದರು. ಗ್ರಾಮದ ರೈತರು ಬೆನ್ನಟ್ಟಿ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಚಿಂಚೋಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.