ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಸಾಯಿಕಟ್ಟಾದ ಸಾಯಿಮಂದಿರದ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಳ್ಳಿಯ ವಸ್ತುಗಳನ್ನು ಕದ್ದೊಯ್ದ ಮಾಡಿದ ಘಟನೆ ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.
ದೇವಾಲಯದ ಮುಂಭಾಗದ ಬಾಗಿಲಿನ ಬೀಗ ಮುರಿದ ಕಳ್ಳರು ದೇವರ ಬೆಳ್ಳಿಯ ಪಾದುಕೆ, ಸಿಂಹದ ಕವಚ, ಕೊಡೆ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಾಯಿಮಂದಿರದಲ್ಲಿ ಏ.10ರಂದು ಅದ್ಧೂರಿಯಾಗಿ ವಾರ್ಷಿಕೋತ್ಸವ ನಡೆದಿತ್ತು. ಭಾನುವಾರ ಮತ್ತು ಸೋಮವಾರ ಮಂದಿರದ ಎದುರುಗಡೆ ಕ್ರಿಕೆಟ್ ಟೂರ್ನಿಯೂ ನಡೆದಿತ್ತು. ಸೋಮವಾರ ಫೈನಲ್ ಪಂದ್ಯ ತಡರಾತ್ರಿವರೆಗೂ ನಡೆದು ಆಯೋಜಕರು 2 ಗಂಟೆಗೆ ತೆರಳಿದ್ದರು. ಆ ಬಳಿಕ ದೇವಾಲಯದೊಳಗೆ ಕಳ್ಳರು ನುಗ್ಗಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಕಳ್ಳರ ಮುಖಗಳು ಸಿಸಿಟಿವಿಯಲ್ಲಿ ಕಾಣಿಸಿದ್ದು, ತನಿಖೆ ನಡೆಯುತ್ತಿದೆ.