August 22, 2026
Saturday, August 22, 2026
spot_img

ದಾಂಡೇಲಿಯಲ್ಲಿ ಖಾಕಿ ಆಪರೇಷನ್: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರು ಅರೆಸ್ಟ್

ಹೊಸದಿಗಂತ ವರದಿ ದಾಂಡೇಲಿ: 

ದಾಂಡೇಲಿಯ ಮಾರುತಿ ನಗರದ ಅಂಬೇಡ್ಕರ್ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿತರನ್ನು ದಾಂಡೇಲಿ ನಗರ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಾರುತಿ ನಗರದ ಅಂಬೇಡ್ಕರ್ ಶಾಲೆ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿದಾಗ, ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಅಂದಾಜು ರೂ.10 ಸಾವಿರ ಮೌಲ್ಯದ ಒಟ್ಟು 241 ಗ್ರಾಂ ಗಾಂಜಾ ಮಾದಕ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಆರೋಪಿತರಾದ‌ ಮಾರುತಿ ನಗರದ ನಿವಾಸಿ ಅಕ್ಷಯ ವಾಡೇಕರ (27), ಹಳಿಯಾಳ ತಾಲೂಕಿನ ಅಡಿಕೆಹೊಸೂರ ಗ್ರಾಮದ ತೌಸೀಫ್ ನಜೀರ ಅಹಮ್ಮದ ಅಜಗಾಂವಕರ (22), ಟೌನಶಿಪ್ ನಿವಾಸಿಗಳಾದ ಸಾಹೀಲ್ ಅನ್ವರ ಶೇಖ (21) ಮತ್ತು ರಾಜೇಶ ದಯಾಶಂಕರ ಯಾದವ (23) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ ಹಾಗೂ ದಾಂಡೇಲಿ ಉಪವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಕಂಡಿ ಮತ್ತು ಸಿ.ಪಿ.ಐ ಶಿವಾನಂದ ಅಂಬೀಗೇರ ಅವರ ಮಾರ್ಗದರ್ಶನದೊಂದಿಗೆ ನಗರ ಠಾಣೆಯ ಪಿ.ಎಸ್.ಐ ಗಳಾದ ಅಮೀನ್ ಅತ್ತಾರ ಮತ್ತು ಕಿರಣ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎಎಸ್ಐಗಳಾದ ಮಂಜುನಾಥ ದೇಮಟ್ಟಿ ಮತ್ತು ಮೆಹಬೂಬ ನಿಂಬುವಾಲೆ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಚಿನ್ಮಯ ಪತ್ತಾರ, ಜಯನಗೌಡ, ಬಸವರಾಜ ತೇಲಸಂಗ, ಕೃಷ್ಣ ಬೆಳ್ಳುವರಿ, ಸುನೀಲ ಲುಗಾಡೆ, ಪ್ರಸನ್ನಕುಮಾರ್.ಜಿ.ಎನ್, ಬಸವರೆಡ್ಡಿ ವೈ.ಕೆ, ಸಂಜು ಎಮ್ಕಿ, ಪರಶುರಾಮ ನಾಗರಾಳ, ಲೋಕೇಶ ದೇವರೆಡ್ಡಿ, ಗುಂಡು ಖಂಡೇಕರ‌ ಮತ್ತು ಶಿವಾನಂದ ಬಿಸಲನಾಯಕ ಅವರು ಭಾಗವಹಿಸಿದ್ದರು

ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಶಸ್ವಿ ಕಾರ್ಯಾಚರಣೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !