ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಖಲಿಸ್ತಾನಿಗಳ ಬಿಸಿ ತಟ್ಟಿದೆ.
‘ಮೊಹಬ್ಬತ್ ಕೀ ದುಖಾನ್’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಖಲಿಸ್ತಾನಿಗಳು, ‘ಖಲಿಸ್ತಾನ್ ಜಿಂದಾಬಾದ್’ ಎನ್ನುವ ಘೋಷಣೆ ಮೊಳಗಿಸಿದ್ದಲ್ಲದೆ, ಖಲಿಸ್ತಾನಿ ಧ್ವಜವನ್ನೂ ಹಾರಿಸಿದ್ದಾರೆ.
ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಬುಧವಾರ ರಾಹುಲ್ ಗಾಂಧಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ವೇಳೆ, ಹಾಲ್‌ನಲ್ಲಿ ಕುಳಿತುಕೊಂಡ ಕೆಲ ವ್ಯಕ್ತಿಗಳು ಖಲಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆಯನ್ನು ಕೂಗಿದ್ದಾರೆ.
ಇತ್ತ ಖಲಿಸ್ತಾನ್ ಗಳ ಈ ನಡೆ ಕಂಡು ರಾಹುಲ್ ಗಾಂದಿ ಮಾತ್ರ ಸುಮ್ಮನೆ ನಗುತ್ತಾ ನಿಂತಿದ್ದರು. ದ್ವೇಷದ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕು ಎಂದು ಈ ವೇಳೆ ಅವರು ಹೇಳಿದ್ದಾರೆ.
ಇದಾದ ಬಳಿಕ ಅಮೆರಿಕದಲ್ಲಿ ನೆಲಸಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ವಿಡಿಯೋ ಒಂದನ್ನು ಹರಿಬಿಟ್ಟಿದ್ದಾನೆ. ಅದರಲ್ಲಿ ರಾಹುಲ್ ಗಾಂಧಿ ಅಮೆರಿಕದಲ್ಲಿ ಎಲ್ಲೇ ಹೋದರೂ ಖಲಿಸ್ತಾನಿಗಳೇ ಸಿಗಲಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಜೂ. 22 ರಂದು ಅಮರಿಕಕ್ಕೆ ಬಂದಾಗಲೂ ಖಲಿಸ್ತಾನಿ ಪ್ರತಿಭಟನೆ ಎದುರಿಸಲಿದ್ದಾರೆ ಎಂದು ಎಚ್ಚರಿಸಿದ್ದಾನೆ.