Sunday, September 7, 2025

ಆಸ್ಟ್ರೇಲಿಯಾದಲ್ಲಿ ಭಾರತೀಯ ಪ್ರಜೆಗಳ ಸ್ವಾತಂತ್ರ ದಿನಾಚರಣೆಗೆ ಅಡ್ಡಿಪಡಿಸಿದ ಖಲಿಸ್ತಾನಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದಲ್ಲಿ ಭಾರತದ ಸ್ವಾತಂತ್ರ ದಿನಾಚರಣೆ ಅಂಗವಾಗಿ ಭಾರತೀಯ ವಲಸಿಗರು ನಡೆಸಿದ್ದ ಕಾರ್ಯಕ್ರಮಕ್ಕೆ ಖಲಿಸ್ತಾನಿ ಪರ ವ್ಯಕ್ತಿಗಳು ಅಡ್ಡಿಪಡಿಸಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಕಾನ್ಸುಲ್ ಜನರಲ್ ಹೊರಗೆ ಸ್ವಾತಂತ್ರ್ಯ ದಿನವನ್ನು ಶಾಂತಿಯುತವಾಗಿ ಆಚರಿಸಲು ಭಾರತೀಯ ಪ್ರಜೆಗಳು ಸೇರಿದ್ದರು. ಈ ವೇಳೆ ಖಲಿಸ್ತಾನಿ ಧ್ವಜಗಳೊಂದಿಗೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://x.com/AdityaRajKaul/status/1956270518195380363?ref_src=twsrc%5Etfw%7Ctwcamp%5Etweetembed%7Ctwterm%5E1956270518195380363%7Ctwgr%5Ed01d7237d82b2289030c76147967b6d2971e5f03%7Ctwcon%5Es1_&ref_url=https%3A%2F%2Fvishwavani.news%2F%2Fforeign%2Fkhalistani-group-causes-ruckus-as-indians-celebrate-independence-day-in-australia-51943.html

ತ್ಯೇಕತಾವಾದಿ ಗುಂಪು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿತು. ಇದಕ್ಕೆ ಪ್ರತಿಯಾಗಿ, ಭಾರತೀಯರು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಅವರಿಗೆ ಟಕ್ಕರ್‌ ನೀಡಿದ್ದಾರೆ.

ಆಸ್ಟ್ರೇಲಿಯಾದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಸ್ಥಿತಿ ದೈಹಿಕ ಘರ್ಷಣೆಗೆ ತಿರುಗುವುದನ್ನು ತಡೆದರು. ನಂತರ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಭಾರತ್ ಮಾತಾ ಕಿ ಜೈ” ಮತ್ತು “ವಂದೇ ಮಾತರಂ” ಘೋಷಣೆಗಳ ನಡುವೆ ತ್ರಿವರ್ಣ ಧ್ವಜವನ್ನು ಕಾನ್ಸುಲೇಟ್‌ನಲ್ಲಿ ಹಾರಿಸಲಾಯಿತು.

ಕಳೆದ ತಿಂಗಳು, ಖಲಿಸ್ತಾನ್ ಪರ ಪ್ರತ್ಯೇಕತಾವಾದಿಗಳು ಆಸ್ಟ್ರೇಲಿಯಾದ ಬೊರೋನಿಯಾದಲ್ಲಿರುವ ಸ್ವಾಮಿನಾರಾಯಣ ದೇವಾಲಯವನ್ನು ವಿರೂಪಗೊಳಿಸಿದ್ದರು. ಕಪ್ಪು ಮಸಿಯಿಂದ ಅವಹೇಳನಕಾರಿ ಬರಹವನ್ನು ಬರೆಯಲಾಗಿತ್ತು. ಅಷ್ಟೇ ಅಲ್ಲದೆ, ಏಷ್ಯನ್ ರೆಸ್ಟೋರೆಂಟ್‌ಗಳನ್ನು ಸಹ ಇದೇ ರೀತಿಯ ಸಂದೇಶ ಮತ್ತು ಅಡಾಲ್ಫ್ ಹಿಟ್ಲರ್‌ನ ಭಾವಚಿತ್ರದಿಂದ ವಿರೂಪಗೊಳಿಸಲಾಗಿತ್ತು.

ಇದನ್ನೂ ಓದಿ