April 13, 2026
Monday, April 13, 2026
spot_img

ಕದನ ವಿರಾಮ ಪ್ರಸ್ತಾಪಕ್ಕೆ NO ಎಂದ ಖಮೇನಿ, ಶಾಂತಿ ಕಾಪಾಡೋ ಟೈಮ್‌ ಅಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಲಾದರೂ ಯುದ್ಧ ನಿಲ್ಲಬಹುದಾ ಎಂದು ಕಾಯುತ್ತಿದ್ದ ದೇಶಗಳಿಗೆ ನಿರಾಸೆಯಾಗಿದೆ. ಕದನ ವಿರಾಮ ಪ್ರಸ್ತಾಪಕ್ಕೆ ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ NO ಎಂದಿದ್ದಾರೆ.

ಶಾಂತಿ ಕಾಪಾಡುವ ಸಮಯ ಇದಲ್ಲ, ಯುದ್ಧ ನಿಲ್ಲಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ ದಾಳಿಯಲ್ಲಿ ಗಾಯಗೊಂಡು ಅಜ್ಞಾತ ಸ್ಥಳದಲ್ಲಿರುವ ಮೊಜ್ತಬಾ ಖಮೇನಿ, ಕದನ ವಿರಾಮವನ್ನು ತಿರಸ್ಕರಿಸಿದ್ದಾರೆ.

ಎರಡು ಮಧ್ಯವರ್ತಿಗಳ ದೇಶಗಳ ಮೂಲಕ ಅಮೆರಿಕ ಸಂದೇಶವನ್ನು ರವಾನಿಸಿದ್ದು, ಇದನ್ನು ಮೊಜ್ತಬಾ ಖಮೇನಿ ತಿರಸ್ಕರಿಸಿರೋದಾಗಿ ಹೇಳಲಾಗಿದೆ. ಅಮೆರಿಕ ಹಾಗೂ ಇಸ್ರೇಲ್ ಮಂಡಿಯೂರಿ ತಪ್ಪೊಪ್ಪಿಕೊಳ್ಳುವವರೆಗೂ, ಆದ ನಷ್ಟಕ್ಕೆ ಪರಿಹಾರ ಕೊಡುವವರೆಗೂ ಶಾಂತಿ ಸ್ಥಾಪನೆಯ ಮಾತೇ ಇಲ್ಲ ಎಂದು ಮೊಜ್ತಬಾ ಖಮೇನಿ ಸಂದೇಶ ರವಾನಿಸಿದ್ದಾರೆ. ಸದ್ಯ ಗೌಪ್ಯ ಸ್ಥಳದಲ್ಲಿ ಮೊಜ್ತಬಾ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇರಾನ್‌, ಇಸ್ರೇಲ್‌ ಹಾಗೂ ಅಮೆರಿಕ ಯುದ್ಧದಿಂದ ಇಡೀ ವಿಶ್ವಕ್ಕೆ ಸಮಸ್ಯೆಯಾಗುತ್ತಿದೆ. ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !