ಎಟಿಎಂ ಮಷೀನ್ ಹೊತ್ತೊಯ್ದ ಖತರ್ನಾಕ್ ಕಳ್ಳರು: ಹಾಗಿದ್ರೆ ATMನಲ್ಲಿದ್ದ ಹಣ ಎಷ್ಟು?

ಹೊಸದಿಗಂತ ಹಾಸನ:

ನಗರ ಹೊರವಲಯದ ಗೊರೂರು ರಸ್ತೆಯ ಹನುಮಂತಪುರದಲ್ಲಿ ಇಂಡಿಯಾ ಒನ್ ಎಟಿಎಂ ಮಷೀನನ್ನೇ ಕಳ್ಳರು ಹೊತ್ತೊಯ್ದ ಘಟನೆ ನಿನ್ನೆ ರಾತ್ರಿ ನಡೆದಿದೆ.

ರಾಜ್ಯ ಹೆದ್ದಾರಿ ಬದಿಯಲ್ಲೇ ಇರುವ ಎಟಿಎಂ ಮಷೀನ್ ಕಾಣೆಯಾಗಿರುವುದು ಬೆಳಗ್ಗೆ ಗಮನಕ್ಕೆ ಬಂದಿದೆ.

ಪರಿಶೀಲಿಸಿದಾಗ ಕಳ್ಳರು ఎటిఎం ಮಷೀನ್ ಹೊತ್ತೊಯ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಎಟಿಎಂ ಮಷೀನ್ ನಲ್ಲಿ ಸುಮಾರು ಒಂದು ಲಕ್ಷ ರೂ. ಹಣ ಮಾತ್ರವೇ ಇತ್ತು ಎನ್ನಲಾಗುತ್ತಿದ್ದು ಇನ್ನೂ ಖಚಿತ ಮಾಹಿತಿ ಹೊರಬೀಳಬೇಕಿದೆ..

ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ಎಟಿಎಂ ಮಿಷನ್ ರಸ್ತೆಯಲ್ಲಿ ಯಾವಾಗಲೂ ಜನರು ಓಡಾಡುವ ಜಾಗವಾಗಿದೆ. ಕೈಗಾರಿಕಾ ಪ್ರದೇಶವಾಗಿರುವುದರಿಂದ ದಿನದ 24 ಗಂಟೆ ಜನ ಸಂಚಾರ ಇರುತ್ತದೆ. ಆದರೂ ಮಿಷಿನ್ ಕಳುವಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು ಶ್ವಾನದಳದ ನೆರವಿನಿಂದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!