ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ಮಹತ್ವದ ಹೆಜ್ಜೆ ಇಟ್ಟಿದ್ದು ಇಂಡಿಯನ್ ಕಾರ್ ರೇಸ್ ಫೆಸ್ಟಿವಲ್‌ನಲ್ಲಿ ಬೆಂಗಳೂರು ತಂಡವನ್ನು ಖರೀದಿಸಿದ್ದಾರೆ.
ಸುದೀಪ್ ಖರೀದಿಸಿದ ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ ಎಂಬ ಹೆಸರನ್ನು ಇಡಲಾಗಿದೆ. ಬೆಂಗಳೂರು ಟೀಮ್ ಓನರ್ ಆಗಿರುವ ಕಿಚ್ಚ ತಂಡಕ್ಕೆ ಬೆಂಗಳೂರು ಟೀಮ್ ಎಂದೇ ಹೆಸರಿಡುತ್ತಾರೆ ಎಂದು ಸುದೀಪ್ ಭಾವಿಸಿದ್ದರು. ಆದರೆ ಕಿಚ್ಚಾಸ್ ಕಿಂಗ್ಸ್ ಎಂದು ಹೆಸರಿಟ್ಟಿದ್ದಕ್ಕೆ ಸುದೀಪ್ ಖುಷಿಯಾಗಿದ್ದಾರೆ. ಈ ಮೂಲಕ ಸಿನಿಮಾದಾಚೆಯೂ ಕಿಚ್ಚ ಹೆಜ್ಜೆ ಇಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಓನರ್‌ಶಿಪ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಮಾಡಲಾಗುವ ಆಟಕ್ಕೆ ಈ ರೇಸ್ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಈ ರೇಸ್ ಸುಲಭದ್ದಲ್ಲ ಎಂದಿದ್ದಾರೆ.