ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ‘ಬಿಗ್ ಬಾಸ್ ಸೀಸನ್ 11’ ಬಹಳ ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ‘ಬಿಗ್ ಬಾಸ್ ಸೀಸನ್ 11’ರ ಶುರುವಾಗಿ ಒಂದು ವಾರ ಕಳೆದಿದೆ. ವಾರಾಂತ್ಯ ಆಗಿರುವುದರಿಂದ ಕಿಚ್ಚ ಸುದೀಪ್ ವಾರದ ಕತೆಗೆ ವೇದಿಕೆಗೆ ವಿಭಿನ್ನವಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಚಪ್ಪಲಿ ಧರಿಸದೇ ಬರಿಗಾಲಿನಲ್ಲಿ ಸುದೀಪ್ ವೇದಿಕೆ ಏರಿದ್ದಾರೆ.
ಸುದೀಪ್ ಅವರು ಸಖತ್ ಸ್ಟೈಲೀಶ್ ಆಗಿ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಮನೆಯ ಮೊದಲ ವಾರ ಕಿಚ್ಚ ಸುದೀಪ್ ಬರಿಗಾಲಿನಲ್ಲಿ ವೇದಿಕೆಗೆ ಬಂದು ಅಚ್ಚರಿ ಮೂಡಿಸಿದ್ದಾರೆ. ತಮ್ಮ ತಾಯಿ ನವರಾತ್ರಿ ಆಚರಿಸುವುದಾಗಿ ಹೇಳಿದ್ದ ಕಾರಣ ಸುದೀಪ್ ಬರಿಗಾಲಿನಲ್ಲಿ ಟ್ರಡಿಷನಲ್ ಕುರ್ತಾದಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಅಮ್ಮ ಒಕೆನಾ ಟ್ರಡಿಷನಲ್ ವೇರ್, ಗ್ರೇ ಕಲರ್ ಹಾಕಿದ್ದೇನೆ, ಚಪ್ಪಲಿ ಕೂಡ ಹಾಕಿಲ್ಲ ಅಂತ ಹೇಳಿದ್ದಾರೆ. ಸದಾ ಸ್ಟೈಲಿಷ್ ಬೂಟ್ಸ್ ಹಾಕುವ ಕಿಚ್ಚ ಈ ರೀತಿ ಬರಿಗಾಲಿನಲ್ಲಿ ಬಂದಿದ್ದರೂ ಡಿಫ್ರೆಂಟ್ ಬಟ್ ಎಲಿಗೆಂಟ್ ಎಂದು ಫ್ಯಾನ್ಸ್ ಹೇಳ್ತಿದ್ದಾರೆ.