ರವಿಚಂದ್ರ ಮನೆಯಲ್ಲಿ ಕಿಚ್ಚ ಸುದೀಪ್-ಕುಮಾರ್ ಸಂಧಾನ ಸಭೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಿಚ್ಚ ಸುದೀಪ್ (Sudeep) ಮತ್ತು ನಿರ್ಮಾಪಕ ಎನ್.ಕುಮಾರ್ (N. Kumar) ನಡುವಿನ ವಿವಾದ ಇದೀಗ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳು ಕಾಣುತ್ತಿದ್ದು, ಇಂದು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ರವಿಚಂದ್ರನ್ (Ravichandran) ನಿವಾಸದಲ್ಲಿ ಸಂಧಾನ ಸಭೆ ನಡೆಯುತ್ತಿದೆ.

ಸಭೆಯಲ್ಲಿ ಸುದೀಪ್, ಕುಮಾರ್, ಶಿವರಾಜ್ ಕುಮಾರ್ (Shivaraj Kumar), ರಾಕ್ ಲೈನ್ ವೆಂಕಟೇಶ್, ಭಾ.ಮಾ ಹರೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಎನ್.ಕುಮಾರ್ ಈ ಹಿಂದೆ ಪ್ರತ್ಯೇಕವಾಗಿ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಸುದೀಪ್ ಮತ್ತು ತಮ್ಮ ನಡುವಿನ ಮನಸ್ತಾಪವನ್ನು ಬಗೆ ಹರಿಸುವಂತೆ ವಿನಂತಿಸಿಕೊಂಡಿದ್ದರು.

ಈ ನಡುವೆ ಕುಮಾರ್ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ತಾವು ಯಾವುದೇ ಸಂಧಾನಕ್ಕೆ ಬರುವುದಿಲ್ಲ ಕೋರ್ಟ್ ನಲ್ಲೇ ನ್ಯಾಯ ಸಿಗಲಿ ಎಂದು ಸುದೀಪ್ ಹೇಳಿಕೆ ನೀಡಿದ್ದರು.

ಇದೀಗ ರವಿಚಂದ್ರನ್ ಅವರ ಮಾತಿನಂತೆ ಪ್ರತಿಭಟನೆಯಿಂದ ಹಿಂದೆ ಸರಿದಿದ್ದ ಕುಮಾರ್, ಆನಂತರ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿದ್ದರು. ಇದೀಗ ರವಿಚಂದ್ರನ್ ಇಬ್ಬರನ್ನೂ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಭೆಯ ನಂತರ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!