ರೂಪೇಶ್ ಗೆ ನಾನು ಕೊಟ್ಟ ಡ್ರೆಸ್ ಕೊಡಲ್ಲ ಎಂದ ಸನ್ಯಾ ಅಯ್ಯರ್ ಗೆ ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕನ್ನಡ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಹೈಲೈಟ್ ಆಗಿದ್ದ ಜೋಡಿ ಅಂದರೆ ರೂಪೇಶ್ ಶೆಟ್ಟಿ ಮತ್ತು ಸನ್ಯಾ ಅಯ್ಯರ್.
ಆದರೆ ಸನ್ಯಾ ಮನೆಯಿಂದ ಹೊರಬಂದ ಮೇಲೆ ರೂಪೇಶ್ ಶೆಟ್ಟಿ ಸ್ವಲ್ಪ ದಿನ ಮಂಕಾಗಿದ್ದರು. ಆ ಬಳಿಕ ತನ್ನ ಆಟಕ್ಕೆ ಮರಳಿದ ಅವರು ಸನ್ಯಾ ಹೊರಹೋಗುವ ಮುನ್ನ ಒಂದು ಪ್ರಾಮಿಸ್ ಅವನ್ನು ಮಾಡಿದ್ದರು. ಅದೇನೆಂದರೆ ಪ್ರತಿ ವೀಕ್ ಎಂಡ್ ಗೆ ಡ್ರೆಸ್ ಕಳುಹಿಸುವುದು.
ಅದೇ ರೀತಿ ಸನ್ಯಾ ಬಟ್ಟೆ ಕಳುಹಿಸುತ್ತಿದ್ದರು. ಆದ್ರೆ ಕೆಲ ದಿನಗಳ ಹಿಂದೆ ತಾವು ಕಳುಹಿಸಿರುವ ಬಟ್ಟೆ ಬಿಗ್ ಬಾಸ್, ರೂಪೇಶ್‌ಗೆ ನೀಡಿಲ್ಲ ಎಂದು ಸಾನ್ಯ ಗರಂ ಆಗಿ ಪೋಸ್ಟ್ ಹಾಕಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಕೂಡ ದೊಡ್ಮನೆಯ ವೇದಿಕೆಯಲ್ಲಿ ಖಡಕ್ ಉತ್ತರ ಕೊಟ್ಟಿದ್ದಾರೆ.
ಈ ಎಲ್ಲದರ ಬೆಳವಣಿಗೆ ಕಿಚ್ಚ ಕೂಡ ಸಾನ್ಯ ಮೇಲೆ ವಾರದ ಮಾತುಕತೆಯಲ್ಲಿ ಗರಂ ಆಗಿದ್ದಾರೆ. ಈ ಕುರಿತು ರೂಪೇಶ್ ಬಳಿಯೇ ಕಿಚ್ಚ ಕ್ಲ್ಯಾರಿಟಿ ಕೇಳಿದ್ದಾರೆ.
ನೀವು ಬಿಗ್ ಬಾಸ್ ಮನೆಗೆ ಹೋಗುವಾಗ ಇವರನ್ನೇ ಸಂಪರ್ಕಿಸಬೇಕು ಅಂತಾ ಹೇಳಿ ಹೋಗ್ತೀರಾ. ಏನೇ ವಿಚಾರ ಇದ್ದರೂ ನಿಮ್ಮ ಕುಟುಂಬಕ್ಕೆ ನಾವು ತಿಳಿಸುತ್ತೇವೆ. ಈಗ ಏನಾಗಿದೆ ಅಂದರೆ ನಿಮಗೆ ಎರಡು ಕಡೆಯಿಂದ ಬಟ್ಟೆ ಬರುತ್ತಿದೆ. ಒಂದು ಮನೆಯಿಂದ ಇನ್ನೊಂದು ನಿಮ್ಮ ಆಪ್ತರಾಗಿರುವಂತಹ ಸನ್ಯಾ ಅವರ ಕಡೆಯಿಂದ. ಇನ್ನು ಸನ್ಯಾ ಹೇಳ್ತಾರೆ ಈ ಬಟ್ಟೆ ಅವರಿಗೆ ಕಳುಹಿಸಿ ಅಂತಾ ಅದು ನಿಮಗೆ ಬಂದಿದೆ. ಆದರೆ ಅದು ನಿಮ್ಮ ಮನೆಯವರಿಗೆ ಸಮಸ್ಯೆಯಿದೆ. ನಾನು ಕಳುಹಿಸಿರುವ ಬಟ್ಟೆ ನಿಮಗೆ ಹೋಗ್ತಾಯಿಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸನ್ಯಾ ಪೋಸ್ಟ್ ಮಾಡುತ್ತಾರೆ.
ಈ ಎಲ್ಲ ಬೆಳವಣಿಗೆ ಕುರಿತು ಮಾತನಾಡಿದ ಕಿಚ್ಚ, ಸನ್ಯಾ ಅವರೇ ಬಿಗ್ ಬಾಸ್ ಮನೆಯಲ್ಲಿ ಇದ್ರಿ ತಾವೂ, ಬಿಗ್ ಬಾಸ್ ನೀವು ಅರ್ಥ ಮಾಡಿಕೊಂಡಿದ್ದೀರಾ ಅಂತಾ ಅಂದುಕೊಂಡಿದ್ವಿ. ಆದರೂ ಕೂಡ ಬಿಗ್ ಬಾಸ್ ನಿಮ್ಮ ಸ್ನೇಹವನ್ನ ಅರ್ಥಮಾಡಿಕೊಂಡು ಎರಡು ವಾರಗಳು ಬಟ್ಟೆಯನ್ನ ಕಳುಹಿಸಿ ಕೊಟ್ಟಿದ್ದಾರೆ . ಆದರೆ ನಿಮ್ಮ ಮನೆಯವರ ಎಮೋಷನ್ಸ್‌ಗೆ ನಾವು ಗೌರವ ಕೊಟ್ಟು ಅವರು ಹೇಳಿದಂತೆ ನಾವು ಫಾಲೋವ್ ಮಾಡೋದು ಕರೆಕ್ಟ್ ಅಥವಾ ತಪ್ಪಾ ರೂಪೇಶ್ ಅವರೇ ಎಂದು ಕಿಚ್ಚ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರ ನೀಡಿದ ರೂಪೇಶ್ , ನಮ್ಮ ಮನೆಯವರು ಏನೋ ಹೇಳ್ತಿದ್ದಾರೆ ಅಂದರೆ ಅದರಲ್ಲಿ ಒಂದು ಅರ್ಥವಿರುತ್ತದೆ. ಸನ್ಯಾ ಸಾರಿ, ಮನೆಯಿಂದ ಹೊರಬಂದ ಮೇಲೆ ನಿನ್ನ ಜೊತೆ ಮಾತನಾಡುತ್ತೀನಿ. ನಿನ್ನ ಪ್ರೀತಿ ನನಗೆ ಅರ್ಥವಾಗುತ್ತದೆ. ನಾನು ಮನೆಯವರ ಪ್ರೀತಿಯಿಂದ ಇಲ್ಲಿಗೆ ಬಂದಿರೋದು, ಇಲ್ಲಿಗೆ ಬಂದ ಮೇಲೆ ನನಗೆ ಸನ್ಯಾ ಸ್ನೇಹ ಸಿಕ್ಕಿರೋದು. ಎರಡು ಕೂಡ ನನಗೆ ಮುಖ್ಯನೇ ಆದರೆ ಸದ್ಯಕ್ಕೆ ನನ್ನ ಮನೆಯವರು ಏನು ಹೇಳ್ತಾರೆ ಅನ್ನೋದನ್ನ ಫಾಲೋವ್ ಮಾಡ್ತೀನಿ. ಬಿಗ್ ಬಾಸ್‌ಗೆ ಬೇಜಾರು ಆಗಿರೋದು ನನಗೂ ಬೇಜಾರಾಗಿದೆ ಎಂದು ಈ ವೇಳೆ ಕ್ಷಮೆಯಾಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!