ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ನ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರನ್ನು ಅಪಹರಣ ಮಾಡಲಾಗಿದೆ.
ಮೂವರು ಕಾರ್ಮಿಕರು ಅಸ್ಸಾಂ ಮೂಲದವರಾಗಿದ್ದು, ಇವರನ್ನು ಶಂಕಿತ ಉಗ್ರರು ಅಪಹರಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಹಾಗೂ ಅಸ್ಸಾಂ ರೈಫಲ್ಸ್ ಒಳಗೊಂಡ ತಂಡವು ಗಣಿ ಕಾರ್ಮಿಕರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದೆ. ಶಂಕಿತ ಉಲ್ಫಾ ಮತ್ತು ಎನ್ ಎಸ್ ಸಿಎನ ಉಗ್ರಗಾಮಿಗಳು ಅಪಹರಿಸಿದ್ದಾರೆ ಎನ್ನಲಾಗಿದೆ.