ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಡ ದ್ವೀಪದಲ್ಲಿ ಹೊಳೆಯುವ ಅದ್ಭುತವಾದ ಜ್ವಾಲಾಮುಖಿಗಳಲ್ಲಿ ಒಂದಾದ ಕಿಲೌಯಾ ಜ್ವಾಲಾಮುಖಿ ಮೂರು ತಿಂಗಳ ವಿರಾಮದ ನಂತರ ಇದೀಗ ಮತ್ತೆ ಸ್ಪೋಟಗೊಳ್ಳಲು ಆರಂಭವಾಗಿದೆ.
ನಿನ್ನೆ ಬೆಳಗ್ಗೆಯಿಂದ ಜ್ವಾಲಾಮುಖಿ ಆರಂಭವಾಗಿದ್ದು, ಕ್ಯಾಲ್ಡೆರಾದಲ್ಲಿನ ಹಲೇಮೌ ಕುಳಿಯೊಳಗೆ ಸ್ಫೋಟ ಸಂಭವಿಸುತ್ತಿದೆ. ಕುಳಿ ನೆಲದ ಮೇಲ್ಮೈಯಲ್ಲಿ ಲಾವಾ ಹರಿಯುತ್ತಿರುವ ಮತ್ತು ಅಲ್ಲಿ ಬಿರುಕು ಬಿಟ್ಟಿರುವ ಫೋಟೊಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ.
ಕಿಲೌಯಾ ಸೆ. 2021 ರಿಂದ ಡಿಸೆಂಬರ್‌ವರೆಗೆ ಸ್ಫೋಟಿಸಿತ್ತು. ವಿರಾಮದ ನಂತರ ಜನವರಿಯಲ್ಲಿ ಮತ್ತೆ ಸ್ಫೋಟ ಆರಂಭವಾಗಿ ಮಾರ್ಚ್‌ನಲ್ಲಿ ಕೊನೆಗೊಂಡಿತ್ತು. ಇದೀಗ ಮತ್ತೆ ಜ್ವಾಲಾಮುಖಿ ಆರಂಭವಾಗಿದೆ.