ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಹಿಂದು ಮುಖಂಡ ಭಬೇಶ್ ಚಂದ್ರ ರಾಯ್ ಅವರ ಹತ್ಯೆಯನ್ನು ಭಾರತ ಬಲವಾಗಿ ಖಂಡಿಸಿದೆ. ಇದು ಮಧ್ಯಂತರ ಸರ್ಕಾರದಡಿ ಅಲ್ಪಸಂಖ್ಯಾತರ ಮೇಲಿನ ವ್ಯವಸ್ಥಿತ ಕಿರುಕುಳದ ಭಾಗವಾಗಿದೆ ಎಂದು ಕರೆದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಇದು ಮಧ್ಯಂತರ ಸರ್ಕಾರದಡಿ ಹಿಂದು ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಶೋಷಿಸುವ ಮಾದರಿಯ ಹತ್ಯೆಯಾಗಿದೆ. ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಬಾಂಗ್ಲಾದೇಶದ ಜವಾಬ್ದಾರಿಗಳನ್ನು ಭಾರತ ನೆನಪಿದೆ.ಈ ಘಟನೆಯನ್ನು ಖಂಡಿಸುತ್ತೇವೆ. ಮಧ್ಯಂತರ ಸರ್ಕಾರ ಹಿಂದುಗಳು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿಯನ್ನು ಮತ್ತೊಮ್ಮೆ ನೆನಪಿಸುತ್ತೇವೆ ಎಂದು ಹೇಳಿದೆ.
ಉತ್ತರ ಬಾಂಗ್ಲಾದೇಶದ ದಿನಜ್‌ಪುರ ಜಿಲ್ಲೆಯ ಅವರ ನಿವಾಸದಿಂದ ಅಪಹರಿಸಲಾಗಿದ್ದ 58 ವರ್ಷದ ರಾಯ್ ಅವರ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದು, ತೀವ್ರ ಗಾಯಗಳಿಂದ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಾಯ್ ಅವರು ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್ತಿನ ಬಿರಾಲ್ ಘಟಕದ ಉಪಾಧ್ಯಕ್ಷರಾಗಿದ್ದರು ಮತ್ತು ಹಿಂದು ಸಮುದಾಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು ಎನ್ನಲಾಗಿದೆ.