ಟಿವಿ ನಿರೂಪಕಿಗೆ ಭವ್ಯ ಬಂಗಲೆ ಗಿಫ್ಟ್‌ ಮಾಡಿದ ಕಿಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಯುದ್ಧ ತಂತ್ರಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸದಾ ಯಾವುದಾದರೂ ಒಂದು ವಿವಾದದ ಮೂಲಕ ಸುದ್ದಿಯಾಗುತ್ತಿದ್ದ ಅವರು ಈ ಬಾರಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ. ಉತ್ತರ ಕೊರಿಯಾದ ಅಧಿಕೃತ ಮಾಧ್ಯಮವೊಂದರ ನಿರೂಪಕರೊಬ್ಬರಿಗೆ ಬಂಗ್ಲೆಯನ್ನು ಬರೆದುಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ.

79 ವರ್ಷದ ರೀ ಚುನ್ ಹೈ ಎಂಬ ಮಹಿಳೆ ಹಲವು ವರ್ಷಗಳಿಂದ ದೇಶದ ಅಧಿಕೃತ ಮಾಧ್ಯಮ ಕೊರಿಯನ್ ಸೆಂಟ್ರಲ್ ಟೆಲಿವಿಷನ್ (ಕೆಸಿಟಿವಿ) ನಲ್ಲಿ ಸುದ್ದಿ ವಾಚಕರಾಗಿದ್ದಾರೆ. 1970 ರ ದಶಕದ ಆರಂಭದಲ್ಲಿ ಕಿಮ್ ಇಲ್ ಸುಂಗ್ ಆಳ್ವಿಕೆಯಿಂದ ಇಲ್ಲಿವರೆಗೂ, ರಾಷ್ಟ್ರದ ಮುಖ್ಯಸ್ಥರ ಸಾವು, ಪರಮಾಣು, ಕ್ಷಿಪಣಿ ಪರೀಕ್ಷೆಗಳು ಮುಂತಾದ ಸರ್ಕಾರ ಕೈಗೊಂಡ ಪ್ರಮುಖ ಘಟನೆಗಳನ್ನು ಪ್ರಜೆಗಳ ಮುಂದಿಟ್ಟಿದ್ದಾರೆ. 50 ವರ್ಷಗಳಿಂದ ದೇಶದಲ್ಲಿ ಸರ್ಕಾರಿ ಪ್ರಸಾರಗಳಿಗೆ ಧ್ವನಿಯಾಗಿದ್ದಾರೆ.

ಈ ಕಾರಣಕ್ಕಾಗಿ ನಾಯಕ ಕಿಮ್ ಜಾಂಗ್ ಉನ್ ಆಕೆಗೆ ಐಷಾರಾಮಿ ನಿವಾಸವನ್ನ ಉಡುಗೊರೆಯಾಗಿ ನೀಡಿ ಮತ್ತು ಆ ಬಂಗಲೆಯ ಪ್ರಾರಂಭೋತ್ಸವವನ್ನು ಕೂಡಾ ಜೊತೆಯಿದ್ದು ನೆರೆವೇರಿಸಿಕೊಟ್ಟಿದ್ದಾರೆ. ತನ್ನ ಆಡಳಿತಾರೂಢ ಪಕ್ಷದ ಧ್ವನಿಯಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುವಂತೆ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!