ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸತತ ೨೦ ಗಂಟೆಗಳ ಬುಲೆಟ್ ಪ್ರೂಫ್ ರೈಲು ಪ್ರಯಾಣ ಮುಗಿಸಿ ರಷ್ಯಾ ತಲುಪಿದ್ದಾರೆ.
ತದನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಇನ್ನೂ ಯುದ್ಧ ಮುಂದುವರಿದಿದ್ದು, ರಷ್ಯಾಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಕುರಿತು ಉನ್ನತ ಸಭೆ ನಡೆಸುವ ಸಾಧ್ಯತೆ ಇದೆ.
ಕಿಮ್ ಅವರು ರಷ್ಯಾ ತಲುಪಿದ ಕೂಡಲೇ ರಷ್ಯನ್ ಅಧಿಕಾರಿಗಳು ಆತ್ಮೀಯ ಸ್ವಾಗತ ಕೋರಿದ್ದಾರೆ. ಕಿಮ್ ಅವರ ರೈಲಿನಲ್ಲಿ ಉನ್ನತ ಶಸ್ತ್ರಾಸ್ತ್ರಗಳು, ಮಿಲಿಟರಿ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವರು ಪ್ರಯಾಣ ಮಾಡಿದ್ದಾರೆ.