ಹೊಸದಿಗಂತ ವರದಿ,ಶಿವಮೊಗ್ಗ:
ತೀರ್ಥಹಳ್ಳಿಯ ಮೇಲಿನಕುರುವಳ್ಳಿ ಬಂಡೆ ಕಾರ್ಮಿಕರ ಪರವಾಗಿ ನವೆಂಬರ್ 3 ರಂದು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಕಿಮ್ಮನೆ ರತ್ನಾಕರ್ ವಾಪಾಸ್ ಪಡೆದಿದ್ದಾರೆ.
ಅ.31 ರಂದು ಮೇಲಿನಕುರುವಳ್ಳಿಯ ಹರಿಜನ ಗಿರಿಜನ ಕಲ್ಲುಕುಟಿಕರ ಸಂಘದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಸಭೆ ನೆಡೆಸಿ ಸರ್ವೇ ನಂ 38 ಹಾಗೂ ಸರ್ವೇ ನಂ 75 ರಲ್ಲಿ ಇರುವಂತಹ ಕಲ್ಲುಗಣಿಗಳ ಗುತ್ತಿಗೆಯ ವಿಚಾರವನ್ನು ಆದಷ್ಟು ಬೇಗ ಇತ್ಯರ್ಥ ಮಾಡಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ ಕಾರಣ ಉಪವಾಸ ಸತ್ಯಾಗ್ರಹವನ್ನು ವಾಪಾಸ್ ಪಡೆಯಲಾಗಿದೆ ಎಂದು ಕಿಮ್ಮನೆ ತಿಳಿಸಿದ್ದಾರೆ.