Wednesday, December 24, 2025

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆ ತೀರ್ಪು ಪ್ರಕಟ: ಬಿಜೆಪಿಗೆ ಭರ್ಜರಿ ಜಯ

ಹೊಸದಿಗಂತ ಮಂಗಳೂರು:

ತೀವ್ರ ಕುತೂಹಲ ಕೆರಳಿಸಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ 18 ಕ್ಷೇತ್ರಗಳ ಚುನಾವಣಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಒಟ್ಟು 18 ಸ್ಥಾನಗಳಲ್ಲಿ ಬಿಜೆಪಿ 10 ಕ್ಷೇತ್ರಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.

ಬಿಜೆಪಿ ಅಭ್ಯರ್ಥಿಗಳು (10 ಸ್ಥಾನ)

ಕಟೀಲು ವಲಯ: ಪದ್ಮಲತಾ ರಾವ್, ಲೋಕಯ್ಯ ಸಾಲಿಯಾನ್, ಶೈಲೇಶ್ ಅಂಚನ್, ಗುರುರಾಜ್ ಮಲ್ಲಿಗೆಯಂಗಡಿ.

ತಾಳಿಪಾಡಿ ವಲಯ: ಗೋಪಾಲ ಪುನರೂರು (ವಾರ್ಡ್ 11), ಧನುಷ್ ಶೆಟ್ಟಿಗಾರ್ (ವಾರ್ಡ್ 12), ಮಲ್ಲಿಕಾ ಗುತ್ತಗಾಡು (ವಾರ್ಡ್ 15).

ಇತರೆ ವಾರ್ಡ್‌ಗಳು: ಮಲ್ಲಿಕಾ ಪ್ರಕಾಶ್ (ಕಿಲೆಂಜೂರು ವಾರ್ಡ್ 5), ದಾಮೋದರ್ ಶೆಟ್ಟಿ (ವಾರ್ಡ್ 6), ಪ್ರಣಿಕ್ (ವಾರ್ಡ್ 16).

ಕಾಂಗ್ರೆಸ್ ಅಭ್ಯರ್ಥಿಗಳು (8 ಸ್ಥಾನ):

ತಾಳಿಪಾಡಿ/ಕಿನ್ನಿಗೋಳಿ ವಲಯ: ಸುನೀತಾ ರೊಡ್ರಿಗಸ್ (ವಾರ್ಡ್ 13), ಸಂತಾನ್ ಡಿಸೋಜ (ವಾರ್ಡ್ 14), ಸುನೀತ (ವಾರ್ಡ್ 17).

ಮೆನ್ನಬೆಟ್ಟು ವಲಯ: ಚಂದ್ರ ರಾಣ್ಯ (ವಾರ್ಡ್ 10), ಪ್ರಕಾಶ್ ಆಚಾರ್ಯ (ವಾರ್ಡ್ 8).

ಇತರೆ ವಾರ್ಡ್‌ಗಳು: ಪ್ರತಿಮಾ ಪ್ರಶಾಂತ್ (ವಾರ್ಡ್ 9), ಕುಶಲತಾ (ಎಳತ್ತೂರು ವಾರ್ಡ್ 18).

ಈ ಬಾರಿಯ ಚುನಾವಣೆಯಲ್ಲಿ ಹಲವು ಪ್ರಭಾವಿ ನಾಯಕರು ಸೋಲಿನ ರುಚಿ ನೋಡಿದ್ದಾರೆ. ಕಾಂಗ್ರೆಸ್‌ನ ಡಾ. ಸಂಜೀವ ಮಡಿವಾಳ, ಪವನ್ ಶೆಟ್ಟಿಗಾರ್ (ಪುನರೂರು), ತಿಮ್ಮಪ್ಪ ಕೋಟ್ಯಾನ್ (ಕಟೀಲು) ಮತ್ತು ಮಯ್ಯದ್ದಿ (ಗುತ್ತಗಾಡು) ಸೋತ ಪ್ರಮುಖರಾದರೆ, ಎಳತ್ತೂರು ವಾರ್ಡ್‌ನಲ್ಲಿ ಬಿಜೆಪಿಯ ಶ್ಯಾಮಲ ಹೆಗ್ಡೆ ಅವರು ಪರಾಭವಗೊಂಡಿದ್ದಾರೆ.

error: Content is protected !!