ಅಡುಗೆಮನೆಯಲ್ಲಿ ಹೆಚ್ಚು ಬಳಸುವ ತರಕಾರಿಗಳಲ್ಲಿ ಬದನೆಕಾಯಿ ಒಂದು. ಬದನೆಕಾಯಿಯಿಂದ ಮಾಡಿದ ಯಾವ ಅಡುಗೆಯಾದರೂ ಅದಕ್ಕೆ ವಿಶಿಷ್ಟವಾದ ರುಚಿ ಇರುತ್ತದೆ. ಆದರೆ ಒಂದು ಸಣ್ಣ ಸಮಸ್ಯೆ ಎಂದರೆ, ಬದನೆಕಾಯಿ ಕತ್ತರಿಸಿದ ಕೂಡಲೇ ಕಂದು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಅದು ಹಾಳಾದಂತೆ ಕಾಣುತ್ತದೆ. ವಾಸ್ತವದಲ್ಲಿ ಬದನೆಕಾಯಿಯಲ್ಲಿ ಇರುವ ಫಿನಾಲಿಕ್ ಸಂಯುಕ್ತಗಳು ಗಾಳಿಯ ಆಮ್ಲಜನಕದ ಜೊತೆ ಪ್ರತಿಕ್ರಿಯಿಸಿ ಬಣ್ಣ ಬದಲಾವಣೆಗೆ ಕಾರಣವಾಗುತ್ತವೆ. ಇದನ್ನು ತಡೆಯಲು ಕೆಲ ಸರಳ ವಿಧಾನಗಳಿವೆ.

ಸ್ಟೇನ್‌ಲೆಸ್ ಸ್ಟೀಲ್ ಚಾಕು ಬಳಸಿ – ಕಬ್ಬಿಣ ಅಥವಾ ತಾಮ್ರದ ಚಾಕುವಿನಲ್ಲಿ ಕತ್ತರಿಸಿದಾಗ ಬದನೆಕಾಯಿ ಬೇಗನೆ ಕಂಡು ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ ಸ್ಟೇನ್‌ಲೆಸ್ ಸ್ಟೀಲ್ ಚಾಕು ಬಳಸುವುದು ಉತ್ತಮ.
ನಿಂಬೆರಸ ಉಪಯೋಗಿಸಿ – ಬದನೆಕಾಯಿ ಹೋಳುಗಳ ಮೇಲೆ ನಿಂಬೆರಸ ಹಚ್ಚಿದರೆ ಅದು ಕಂದು ಬಣ್ಣಕ್ಕೆ ತಿರುಗುವುದಿಲ್ಲ. ನಿಂಬೆರಸದಲ್ಲಿರುವ ವಿಟಮಿನ್ ಸಿ ಬಣ್ಣ ಬದಲಾವಣೆಯನ್ನು ತಡೆಯುತ್ತದೆ.
ಉಪ್ಪು ನೀರಿನಲ್ಲಿ ನೆನೆಸಿಡಿ – ಕತ್ತರಿಸಿದ ಬದನೆಕಾಯಿಯನ್ನು ಉಪ್ಪಿನ ನೀರಿನಲ್ಲಿ ನೆನೆಸಿಟ್ಟರೆ ಅದು ಫ್ರೆಶ್ ಆಗಿ ಉಳಿಯುತ್ತದೆ ಮತ್ತು ಬಣ್ಣ ಬದಲಾವಣೆಯು ಕಡಿಮೆ ಆಗುತ್ತದೆ.

ಗ್ಲಾಸ್ ಪಾತ್ರೆಯಲ್ಲಿ ಸಂಗ್ರಹಿಸಿ – ಬದನೆಕಾಯಿಯನ್ನು ಗಾಜಿನ ಬಾಟಲಿ ಅಥವಾ ಡಬ್ಬಿಯಲ್ಲಿ ಇಟ್ಟು, ಸ್ವಲ್ಪ ನಿಂಬೆರಸ ಸೇರಿಸಿ ಫ್ರಿಜ್‌ನಲ್ಲಿ ಇಟ್ಟರೆ ಅದು ಹಾಳಾಗದೆ ತಾಜಾ ಇರುತ್ತದೆ.