ಮನೆಯಲ್ಲಿ ಫ್ರಿಡ್ಜ್ ಬಾಗಿಲು ತೆಗೆಯುತ್ತಿದ್ದಂತೆ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗುವುದು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಫ್ರಿಡ್ಜ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸದೇ ಇರುವುದು. ತರಕಾರಿಗಳನ್ನು ತಿಂಗಳುಗಟ್ಟಲೆ ಫ್ರಿಡ್ಜ್‌ನಲ್ಲೇ ಇಡುವುದು, ಹಾಲು, ಮೊಸರು ಮುಂತಾದ ಹಾಲು ಉತ್ಪನ್ನಗಳನ್ನು ಸರಿಯಾಗಿ ಮುಚ್ಚದೇ ಇಡುವುದು ದುರ್ವಾಸನೆಗೆ ಕಾರಣವಾಗುತ್ತದೆ. ಹೀಗಾಗಿ ವಾರಕ್ಕೊಮ್ಮೆಯಾದರೂ ಫ್ರಿಡ್ಜ್ ಸ್ವಚ್ಛತೆಗೆ ಗಮನ ಕೊಡುವುದು ಅಗತ್ಯ.
ಫ್ರಿಡ್ಜ್‌ನಲ್ಲಿರುವ ಕೆಟ್ಟ ವಾಸನೆಯನ್ನು ತೊಲಗಿಸಲು ಮನೆಯಲ್ಲೇ ಲಭ್ಯವಿರುವ ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು.
ಬೇಕಿಂಗ್ ಸೋಡಾ ಬಳಕೆ – ಒಂದು ಕಪ್ ಬೇಕಿಂಗ್ ಸೋಡಾವನ್ನು ಫ್ರಿಡ್ಜ್ ಒಳಗೆ ಇಟ್ಟು, ಒಂದು ಗಂಟೆಯ ನಂತರ ತೆಗೆದರೆ ದುರ್ವಾಸನೆ ಹೀರಿಕೊಳ್ಳುತ್ತದೆ.
ಕಾಫಿ ಬೀಜಗಳು – ಬೇಕಿಂಗ್ ಶೀಟ್‌ನಲ್ಲಿ ಕಾಫಿ ಬೀಜಗಳನ್ನು ಹಾಕಿ, ಫ್ರಿಡ್ಜ್‌ನ ಮೂಲೆಗಳಲ್ಲಿ ಇಟ್ಟರೆ, ರಾತ್ರಿಯೊಳಗೆ ದುರ್ವಾಸನೆ ಹೋಗುತ್ತದೆ.
ಉಪ್ಪಿನ ಬಿಸಿ ನೀರು – ಬಿಸಿ ನೀರಿಗೆ ಉಪ್ಪು ಹಾಕಿ, ಆ ನೀರಿನಿಂದ ಫ್ರಿಡ್ಜ್ ತೊಳೆಯುವುದರಿಂದ ದುರ್ನಾತ ಕಡಿಮೆಯಾಗುತ್ತದೆ.
ನಿಂಬೆ ಹಣ್ಣು – ನಿಂಬೆಯನ್ನು ಸಣ್ಣ ಚೂರುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಡುವುದರಿಂದ ತಾಜಾ ವಾಸನೆ ಬರುತ್ತದೆ.
ಓಟ್ಸ್ ಧಾನ್ಯ – ಅಲ್ಯೂಮಿನಿಯಂ ಪಾತ್ರೆಯಲ್ಲಿ ಸ್ವಲ್ಪ ಓಟ್ಸ್ ಇಡುವುದು ದುರ್ವಾಸನೆಯನ್ನು ಹೀರಿಕೊಳ್ಳುತ್ತದೆ.
Essential Oil – ಹತ್ತಿ ಉಂಡೆಗೆ Essential Oil ಅದ್ದಿ, ಫ್ರಿಡ್ಜ್‌ನಲ್ಲಿ ಇಟ್ಟರೆ ಸುಗಂಧ ಬರುತ್ತದೆ.
ವೈಟ್ ವಿನೆಗರ್ – ಫ್ರಿಡ್ಜ್‌ನಲ್ಲಿಡುವುದರಿಂದ ದುರ್ವಾಸನೆ ಕಡಿಮೆಯಾಗುತ್ತದೆ.
ಇದ್ದಿಲು ವಿಧಾನ – ಒಂದು ಪಾತ್ರೆಯಲ್ಲಿ ಇದ್ದಿಲನ್ನು ಇಟ್ಟು, ಫ್ರಿಡ್ಜ್ ತಾಪಮಾನ ಸರಿಪಡಿಸಿ ಒಂದು ಗಂಟೆ ಬಳಿಕ ತೆಗೆದರೆ ದುರ್ವಾಸನೆ ಹೋಗುತ್ತದೆ.
ಈ ವಿಧಾನಗಳನ್ನು ಅನುಸರಿಸುವುದರಿಂದ ಫ್ರಿಡ್ಜ್ ಯಾವಾಗಲೂ ತಾಜಾ ಪರಿಮಳ ಬರುತ್ತದೆ. ಜೊತೆಗೆ, ಆಹಾರವನ್ನು ಸರಿಯಾಗಿ ಮುಚ್ಚಿ ಇಡುವುದು ಮತ್ತು ಹಾಳಾದ ಆಹಾರವನ್ನು ತಕ್ಷಣ ತೆಗೆದು ಹಾಕುವುದು ಮುಖ್ಯ.
ಫ್ರಿಡ್ಜ್ ಸ್ವಚ್ಛವಾಗಿದ್ದರೆ ಮನೆಯ ವಾತಾವರಣವೂ ಆರೋಗ್ಯಕರವಾಗಿರುತ್ತದೆ. ದುರ್ವಾಸನೆ ತೊಲಗಿಸಲು ಹೆಚ್ಚು ವೆಚ್ಚ ಮಾಡುವ ಅವಶ್ಯಕತೆಯಿಲ್ಲ, ಮನೆಯಲ್ಲೇ ಇರುವ ಸಾಮಗ್ರಿಗಳು ಸಾಕು. ನಿಯಮಿತವಾಗಿ ಈ ಸಲಹೆಗಳನ್ನು ಅನುಸರಿಸುವುದರಿಂದ ಫ್ರಿಡ್ಜ್ ಯಾವಾಗಲೂ ಸ್ವಚ್ಛವಾಗಿಯೂ ಸುಗಂಧವಾಗಿಯೂ ಇರುತ್ತದೆ.