February 8, 2026
Sunday, February 8, 2026
spot_img

Kitchen Tips | ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತಾ? ಈ ಟ್ರಿಕ್ಸ್ ಟ್ರೈ ಮಾಡಿ! ಗ್ಯಾಸ್ ಉಳಿತಾಯ ಆಗುತ್ತೆ ನೋಡಿ

ಇಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುತ್ತಿರುವುದರಿಂದ, ಅದನ್ನು ಹೆಚ್ಚು ದಿನ ಬಳಕೆ ಮಾಡಿಕೊಳ್ಳೋದು ಬಹಳ ಮುಖ್ಯವಾಗಿದೆ. ನಮ್ಮ ಅಡುಗೆ ಮಾಡುವ ವಿಧಾನದಲ್ಲೇ ಸ್ವಲ್ಪ ಬದಲಾವಣೆ ತಂದರೆ, ಅಡುಗೆ ಅನಿಲವು ಹೆಚ್ಚು ದಿನ ಉಳಿಯುತ್ತದೆ. ಕೆಲವು ಸಣ್ಣ ಟ್ರಿಕ್ಸ್‌ಗಳನ್ನು ಪಾಲಿಸಿದರೆ, ಖರ್ಚು ಕಡಿಮೆ ಆಗುವುದರ ಜೊತೆಗೆ ಗ್ಯಾಸ್ ಬಳಕೆಯೂ ಕಡಿಮೆಯಾಗುತ್ತದೆ.

ಮುಂಚಿತ ತಯಾರಿ ಮಾಡಿದ್ರೆ ಉಳಿತಾಯ
ಅಡುಗೆ ಶುರು ಮಾಡುವ ಮೊದಲು ಬೇಕಾದ ಎಲ್ಲಾ ಪದಾರ್ಥಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ. ತರಕಾರಿಗಳನ್ನು ಕತ್ತರಿಸುವುದು, ಮಸಾಲೆಗಳನ್ನು ಸಿದ್ಧಪಡಿಸುವುದು ಇವುಗಳನ್ನು ಗ್ಯಾಸ್ ಆನ್ ಮಾಡುವ ಮೊದಲು ಮಾಡಿದರೆ ಅನಾವಶ್ಯಕವಾಗಿ ಗ್ಯಾಸ್ ಸುಡುವುದನ್ನು ತಪ್ಪಿಸಬಹುದು.

ಸರಿಯಾದ ಪಾತ್ರೆ ಆಯ್ಕೆ ಮಾಡಿ
ಹೆಚ್ಚು ಅಗಲ ಇರುವ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಜ್ವಾಲೆ ಹೊರಗೆ ಹರಡುತ್ತದೆ. ಆದ್ದರಿಂದ ತಳಭಾಗ ಸಮನಾಗಿರುವ ಮತ್ತು ಗ್ಯಾಸ್ ಸ್ಟೌವ್ ಗಾತ್ರಕ್ಕೆ ತಕ್ಕ ಪಾತ್ರೆ ಬಳಸಿದರೆ ಅನಿಲ ಉಳಿತಾಯವಾಗುತ್ತದೆ.

ಮುಚ್ಚಳ ಹಾಕಿ ಅಡುಗೆ ಮಾಡಿ
ಅಡುಗೆ ಮಾಡುವಾಗ ಪಾತ್ರೆಗೆ ಮುಚ್ಚಳ ಹಾಕಿದರೆ ಆಹಾರ ಬೇಗ ಬೇಯುತ್ತದೆ. ಇದರಿಂದ ಸಮಯವೂ ಉಳಿಯುತ್ತದೆ, ಗ್ಯಾಸ್ ಬಳಕೆಯೂ ಕಡಿಮೆಯಾಗುತ್ತದೆ. ವಿಶೇಷವಾಗಿ ದಾಲ್, ತರಕಾರಿ ಇತ್ಯಾದಿ ಬೇಯಿಸುವಾಗ ಈ ಅಭ್ಯಾಸ ಉಪಯೋಗಿ.

ಬೆಂಕಿ ನಿಯಂತ್ರಣ ಮುಖ್ಯ
ಹೆಚ್ಚು ಬೆಂಕಿಯಲ್ಲಿ ಅಡುಗೆ ಮಾಡಿದರೆ ಬೇಗ ಬೇಯುತ್ತದೆ ಅನ್ನೋದು ತಪ್ಪು ಕಲ್ಪನೆ. ಮಧ್ಯಮ ಬೆಂಕಿಯಲ್ಲಿ ಅಡುಗೆ ಮಾಡಿದರೆ ಆಹಾರ ಸಮವಾಗಿ ಬೇಯುತ್ತದೆ ಮತ್ತು ಗ್ಯಾಸ್‌ವೂ ಉಳಿಯುತ್ತದೆ.

ಇದನ್ನೂ ಓದಿ:

ಸ್ಟೌವ್ ಸ್ವಚ್ಛತೆ ಕಾಪಾಡಿ
ಸ್ಟೌವ್ ಬರ್ನರ್ ಗಳಲ್ಲಿ ಧೂಳು ಅಥವಾ ಎಣ್ಣೆ ಕಟ್ಟಿ ಹೋದರೆ ಬೆಂಕಿ ಸರಿಯಾಗಿ ಬರೋದಿಲ್ಲ. ಹೀಗಾದರೆ ಗ್ಯಾಸ್ ಹೆಚ್ಚು ಖರ್ಚಾಗುತ್ತದೆ. ಆದ್ದರಿಂದ ವಾರಕ್ಕೊಮ್ಮೆ ಸ್ಟೌವ್ ಸ್ವಚ್ಛಗೊಳಿಸುವುದು ಒಳ್ಳೆಯದು.

ಈ ಸಣ್ಣ ಅಭ್ಯಾಸಗಳನ್ನು ದಿನನಿತ್ಯ ಪಾಲಿಸಿದರೆ, ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಸಾಕಾಗುತ್ತದೆ. ಖರ್ಚು ಕಡಿಮೆ ಆಗುವುದರ ಜೊತೆಗೆ, ನಮ್ಮ ಅಡುಗೆಗೂ ಸರಳ ಮತ್ತು ಸುಲಭವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !