ಮಳೆಗಾಲದ ತೇವ ವಾತಾವರಣದಲ್ಲಿ ಉಪ್ಪಿನಕಾಯಿ ಬೇಗನೆ ಹಗಳಬಹುದು. ಈ ಸಂದರ್ಭದಲ್ಲಿ ಸರಿಯಾದ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಂಡರೆ ಉಪ್ಪಿನಕಾಯಿ ತಿಂಗಳುಗಟ್ಟಲೆ ತಾಜಾ ಆಗಿರುತ್ತೆ.
ಶುಷ್ಕ ಗ್ಲಾಸ್ ಜಾರ್ ಬಳಸುವುದು:
ಉಪ್ಪಿನಕಾಯಿ ಇರಿಸುವ ಜಾರನ್ನು ಮುಚ್ಚಿದರೂ ಒಳಗೆ ತೇವಾಂಶವಾದರೆ ಉಪ್ಪಿನಕಾಯಿ ಹಾಳಾಗಬಹುದು. ಆದುದರಿಂದ, ಗ್ಲಾಸ್ ಅಥವಾ ಸೆರಾಮಿಕ್ ಪಾತ್ರೆಯನ್ನು ಬಳಸುವುದೇ ಉತ್ತಮ. ಅದನ್ನು ಬೆಂಕಿಯ ಮೇಲೆ ಅಥವಾ ಬಿಸಿಯಾದ ನೀರಿನಲ್ಲಿ ತೇವ ಮುಕ್ತವಾಗುವವರೆಗೆ ಒಣಗಿಸಿ ಉಪಯೋಗಿಸಿ.
ಸಣ್ಣ ಪ್ರಮಾಣದಲ್ಲಿ ತೈಲ ಸೇರಿಸಿ:
ಉಪ್ಪಿನಕಾಯಿಯಲ್ಲಿ ಎಣ್ಣೆ (ಎಳ್ಳೆಣ್ಣೆ) ಸೇರಿಸುದರಿಂದ ತೇವದಿಂದ ಉಪ್ಪಿನಕಾಯಿ ಹಾಳಾಗುವುದನ್ನು ತಡೆಯಬಹುದು. ಎಣ್ಣೆ ಬಾಕ್ಟೀರಿಯಾ ಅಥವಾ ಫಂಗಸ್ ಉಂಟಾಗದಂತೆ ತಡೆಯುತ್ತದೆ. ಎಣ್ಣೆ ಪೂರಕವಾಗಿದ್ದರೆ ಉಪ್ಪಿನಕಾಯಿ ಹೆಚ್ಚು ದಿನ ಉಳಿಯುತ್ತದೆ.
ಒಣ ಚಮಚ ಬಳಸುವುದು:
ಪ್ರತಿ ಬಾರಿ ಉಪ್ಪಿನಕಾಯಿ ತೆಗೆದುಕೊಳ್ಳುವಾಗ ಒಣ ಚಮಚವನ್ನೇ ಉಪಯೋಗಿಸಿ. ತೇವದ ಚಮಚ ಬಳಸಿದರೆ ಬಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ಉಪ್ಪಿನಕಾಯಿ ಹಾಳಾಗಲು ಕಾರಣವಾಗಬಹುದು.
ಉಪ್ಪಿನಕಾಯಿಗೆ ವಿನೆಗರ್ ಅಥವಾ ಸಿಟ್ರಿಕ್ ಆಮ್ಲವನ್ನು ಸೇರಿಸಿ:
ಉಪ್ಪಿನಕಾಯಿಯನ್ನು ಸಂರಕ್ಷಿಸಲು ಸುಲಭವೆಂದರೆ ವಿನೆಗರ್ ಅಥವಾ ಸಿಟ್ರಿಕ್ ಆಮ್ಲವನ್ನು ಬಳಸುವುದು ಉತ್ತಮ. ಉಪ್ಪಿನಕಾಯಿಗೆ 2-3 ಹನಿ ಬಿಳಿ ವಿನೆಗರ್ ಅಥವಾ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿದಾಗ, ಅದರ pH ಮಟ್ಟವು ಕಡಿಮೆಯಾಗುತ್ತದೆ, ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುವುದನ್ನು ತಡೆಯುತ್ತದೆ.
ಉಪ್ಪಿನಕಾಯಿ ಭರಣಿಯನ್ನು ಬಿಸಿಲಿನಲ್ಲಿಡಿ:
ಉಪ್ಪಿನಕಾಯಿ ಭರಣಿಯನ್ನು ಬಿಸಿಲಿನಲ್ಲಿ ಇಡುವುದು ಉಪ್ಪಿನಕಾಯಿಗೆ ಒಣತೆ ಮತ್ತು ಸ್ವಾಭಾವಿಕ ಸಂರಕ್ಷಣೆ ನೀಡುತ್ತದೆ. ವಾರದಲ್ಲಿ ಕನಿಷ್ಠ ಒಂದೆರಡು ಬಾರಿ ಸೂರ್ಯನ ಬೆಳಕಿನಲ್ಲಿ ಕೆಲವು ಗಂಟೆಗಳ ಕಾಲ ಜಾರನ್ನು ಇಡುವುದು ಉತ್ತಮ.
ಈ ಸರಳ ಕ್ರಮಗಳನ್ನು ಅನುಸರಿಸಿ ಮಳೆಗಾಲದಲ್ಲೂ ನಿಮ್ಮ ಮನೆಯಲ್ಲಿ ಉಪ್ಪಿನಕಾಯಿ ರುಚಿಯಾಗಿ ಹಾಗೂ ಸುರಕ್ಷಿತವಾಗಿ ಉಳಿಯಬಹುದು.