KITCHEN TIPS | ತಿಂಗಳುಗಟ್ಟಲೆ ಹುಣಸೆಹಣ್ಣು ಹಾಳಾಗದಂತೆ ಕಾಪಾಡಿಕೊಳ್ಳೋದಕ್ಕೆ ಈ ಟಿಪ್ಸ್ ಫಾಲೋ ಮಾಡಿ!

ಭಾರತೀಯ ಅಡುಗೆ ಮನೆಯಲ್ಲಿ ಪ್ರತಿಯೊಂದು ಅಡುಗೆಯಲ್ಲಿ ಉಪಯೋಗಿಸುವ ಪದಾರ್ಥವೆಂದರೆ ಹುಣಸೆಹಣ್ಣು. ಇದನ್ನು ಚಟ್ನಿ, ಗೊಜ್ಜು, ಸಾಂಬಾರ್ ಗಳ ರುಚಿ ಹೆಚ್ಚಿಸಲು ನಿರಂತರವಾಗಿ ಬಳಸಲಾಗುತ್ತದೆ. ಆದರೆ ಸ್ವಲ್ಪ ಪ್ರಮಾಣದಲ್ಲೇ ಬಳಸುವ ಈ ಹುಣಸೆಹಣ್ಣನ್ನು ಸರಿಯಾಗಿ ಶೇಖರಿಸದಿದ್ದರೆ, ಶಿಲೀಂಧ್ರ ಹಿಡಿಯುವುದು, ಜಿಗುಟಾಗುವುದು ಹಾಗೂ ವಾಸನೆ ಬರುತ್ತದೆ. ಇವು ಆರೋಗ್ಯದ ಮಟ್ಟಿಗೆ ಹಾನಿಕಾರಕವಾಗಬಲ್ಲದು. ಈ ಕಾರಣದಿಂದ, ಹುಣಸೆಹಣ್ಣನ್ನು ದೀರ್ಘಕಾಲದವರೆಗೆ ಶುದ್ಧ ಮತ್ತು ಫ್ರೆಶ್ ಆಗಿಡಲು ಸರಿಯಾದ ಶೇಖರಣೆ ಅಗತ್ಯವಾಗಿದೆ.

ಸ್ವಚ್ಛ ಹಾಗೂ ಒಣ ಡಬ್ಬಗಳನ್ನು ಬಳಸುವುದು ಮುಖ್ಯ
ಹುಣಸೆಹಣ್ಣನ್ನು ಶೇಖರಿಸಲು ಬಳಸುವ ಪಾತ್ರೆ ಅಥವಾ ಡಬ್ಬಗಳು ಸಂಪೂರ್ಣ ಒಣವಾಗಿರಬೇಕು. ತೇವಾಂಶವಿರುವ ಚಮಚ ಅಥವಾ ಕೈಯಿಂದ ಹುಣಸೆಹಣ್ಣಿಗೆ ಸ್ಪರ್ಶಿಸಿದರೆ ಶಿಲೀಂಧ್ರದ ಬೆಳವಣಿಗೆಗೆ ಪ್ರಾರಂಭವಾಗಬಹುದು. ಗಾಜಿನ ಬಾಟಲಿ ಅಥವಾ ಸ್ಟೀಲ್ ಡಬ್ಬಗಳು ಅತ್ಯುತ್ತಮ ಆಯ್ಕೆ.

video thumbnail

ಉಪ್ಪಿನ ಉಪಯೋಗದಿಂದ ತೇವಾಂಶದ ನಿಯಂತ್ರಣ
ಸಾಂಪ್ರದಾಯಿಕ ರೀತಿ ಎಂದು ಪರಿಗಣಿಸಲಾದರೂ, ಹುಣಸೆಹಣ್ಣಿಗೆ ಉಪ್ಪು ಸೇರಿಸುವುದು ಅದನ್ನು ಫ್ರೆಶ್ ಆಗಿಡಲು ಸಹಾಯಕ. ಪ್ರತಿ ಕೆ.ಜಿ. ಹುಣಸೆಹಣ್ಣಿಗೆ 10 ಗ್ರಾಂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಉಪ್ಪು ತೇವಾಂಶವನ್ನು ಹೀರಿಕೊಳ್ಳುವ ಮೂಲಕ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುತ್ತದೆ.

video thumbnail

ಸೂರ್ಯನ ಬೆಳಕಿನಲ್ಲಿ ಒಣಗಿಸುವುದು ಉತ್ತಮ ಕ್ರಮ
ಹುಣಸೆಹಣ್ಣನ್ನು ಸ್ವಲ್ಪ ಸಮಯ ಸೂರ್ಯನ ಬೆಳಕಿನಲ್ಲಿ ಒಣಗಿಸಿದರೆ ಅದರಲ್ಲಿರುವ ಅತಿರೇಕ ತೇವಾಂಶ ಹೊರಹೋಗುತ್ತದೆ. ಇದು ಶೇಖರಣೆಗೆ ಇನ್ನಷ್ಟು ಸುರಕ್ಷತೆ ನೀಡುತ್ತದೆ. ಒಣಗಿಸಿದ ನಂತರ ಅದನ್ನು ತಕ್ಷಣ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿ.

Jar of tasty tamarind sauce, spoon and fresh pods on wooden table Jar of tasty tamarind sauce, spoon and fresh pods on wooden table  tamarind in jar stock pictures, royalty-free photos & images

ಕಡಿಮೆ ತಾಪಮಾನದಲ್ಲಿ ಶೇಖರಣೆ ಹೆಚ್ಚು ಪರಿಣಾಮಕಾರಿ
ಹುಣಸೆಹಣ್ಣನ್ನು ಫ್ರಿಡ್ಜ್ ಅಥವಾ ಫ್ರೀಜರ್‌ನಲ್ಲಿ ಇಡುವುದರಿಂದ ಇದು ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತದೆ. ವಿಶೇಷವಾಗಿ ತಯಾರಿಸಿದ ಪೇಸ್ಟ್ ರೂಪದಲ್ಲಿರುವ ಹುಣಸೆಹಣ್ಣನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡುವುದು ಉತ್ತಮ.

video thumbnail

ಹುಣಸೆಹಣ್ಣಿನ ಮೇಲ್ಮೈಯಲ್ಲಿ ಬದಲಾವಣೆ, ಬಣ್ಣ ಬದಲಾವಣೆ ಅಥವಾ ದುರ್ವಾಸನೆ ಕಾಣಿಸಿದರೆ, ಆ ಭಾಗವನ್ನು ತಕ್ಷಣ ತೆಗೆದು ಹಾಕಿ. ಪ್ರತಿಮೂರು ವಾರಗಳಿಗೊಮ್ಮೆ ಪರಿಶೀಲನೆ ಮಾಡುವುದು ಉತ್ತಮ. ಬಳಸುವ ವೇಳೆ, ಬೇಕಾದಷ್ಟನ್ನು ಮಾತ್ರ ತೆಗೆದು ಮತ್ತೆ ಬಾಕಿ ಹುಣಸೆಯನ್ನು ಬಿಗಿಯಾಗಿ ಮುಚ್ಚಿ ಇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!