ಜೇನುತುಪ್ಪ ಆರೋಗ್ಯಕ್ಕೆ ಅಮೂಲ್ಯವಾದ ಆಹಾರ. ತೂಕ ಇಳಿಕೆ, ರೋಗ ನಿರೋಧಕ ಶಕ್ತಿ ಹೆಚ್ಚಳ, ಜೀರ್ಣಕ್ರಿಯೆ ಸುಧಾರಣೆ ಎಲ್ಲಕ್ಕೂ ಜೇನುತುಪ್ಪ ಬಳಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಹನಿ ಜೇನುತುಪ್ಪವೂ ಶುದ್ಧವಾಗಿರುತ್ತದೆಯೇ? ಈ ಪ್ರಶ್ನೆ ಬಹುತೇಕ ಜನರ ಮನಸ್ಸಿನಲ್ಲಿ ಇರುತ್ತದೆ. ಒಳ್ಳೆಯದೇನಂದ್ರೆ, ಜೇನುತುಪ್ಪ ಅಸಲಿನಾ ನಕಲಿನಾ ಅನ್ನೋದನ್ನು ತಿಳಿಯಲು ನಿಮಗೆ ಪ್ರಯೋಗಶಾಲೆ ಬೇಕಾಗಿಲ್ಲ. ನಿಮ್ಮ ಅಡುಗೆಮನೆಯಲ್ಲಿ ಇದ್ದ ವಸ್ತುಗಳೇ ಸಾಕು.
ನೀರಿನ ಪರೀಕ್ಷೆ:
ಒಂದು ಗ್ಲಾಸ್ ನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ. ಶುದ್ಧ ಜೇನುತುಪ್ಪ ನೀರಿನಲ್ಲಿ ಕರಗದೆ ತಳಕ್ಕೆ ನೇರವಾಗಿ ಇಳಿಯುತ್ತದೆ. ತಕ್ಷಣವೇ ಕರಗಿದರೆ ಅಥವಾ ನೀರಿನಲ್ಲಿ ಹರಡಿದರೆ, ಅದು ನಕಲಿ ಆಗಿರುವ ಸಾಧ್ಯತೆ ಹೆಚ್ಚು.
ಬೆಂಕಿ ಪರೀಕ್ಷೆ:
ಒಂದು ಬೆಂಕಿಪೊಟ್ಟಣ ಕಡ್ಡಿಯನ್ನು ಜೇನುತುಪ್ಪದಲ್ಲಿ ಮುಳುಗಿಸಿ ಬೆಂಕಿ ಹಚ್ಚಿ. ಶುದ್ಧ ಜೇನುತುಪ್ಪ ಇದ್ದರೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ತೇವಾಂಶ ಜಾಸ್ತಿ ಇದ್ದರೆ ಬೆಂಕಿ ಹೊತ್ತಿಕೊಳ್ಳುವುದಿಲ್ಲ.
ಹತ್ತಿ ಪರೀಕ್ಷೆ:
ಹತ್ತಿಯನ್ನು ಜೇನುತುಪ್ಪದಲ್ಲಿ ಮುಳುಗಿಸಿ ದೀಪದಂತೆ ಹಚ್ಚಿ ನೋಡಿ. ನಿಜವಾದ ಜೇನುತುಪ್ಪಕ್ಕೆ ಬೆಂಕಿ ಹಿಡಿಯುತ್ತದೆ, ನಕಲಿ ಜೇನುತುಪ್ಪ ಹಚ್ಚಿದರೆ ಚಿಟ್ಚಿಟ ಶಬ್ದ ಬರುತ್ತದೆ.
ಇದನ್ನೂ ಓದಿ:
ಪೇಪರ್ ಟೆಸ್ಟ್:
ಕಾಗದದ ಮೇಲೆ ಒಂದು ಹನಿ ಜೇನುತುಪ್ಪ ಹಾಕಿ. ಶುದ್ಧ ಜೇನುತುಪ್ಪ ಕಾಗದದಲ್ಲಿ ಹೀರಿಕೊಳ್ಳುವುದಿಲ್ಲ. ನಕಲಿ ಜೇನುತುಪ್ಪ ಕಾಗದವನ್ನು ಒದ್ದೆಯಾಗಿಸುತ್ತದೆ.
ಫ್ರಿಡ್ಜ್ ಪರೀಕ್ಷೆ:
ಜೇನುತುಪ್ಪವನ್ನು ಫ್ರಿಡ್ಜ್‌ನಲ್ಲಿ ಇಡಿ. ನಿಜವಾದ ಜೇನುತುಪ್ಪ ಗಟ್ಟಿಯಾಗುತ್ತದೆ, ನಕಲಿ ಜೇನುತುಪ್ಪ ದ್ರವ ಸ್ಥಿತಿಯಲ್ಲೇ ಇರುತ್ತದೆ.
ಸಣ್ಣ ಸಲಹೆ:
ಯಾವಾಗಲೂ ವಿಶ್ವಾಸಾರ್ಹ ಬ್ರ್ಯಾಂಡ್‌ಗಳು ಅಥವಾ ನೇರವಾಗಿ ಜೇನು ಸಾಕಾಣಿಕೆದಾರರಿಂದ ಜೇನುತುಪ್ಪ ಖರೀದಿಸುವುದು ಉತ್ತಮ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ದೊಡ್ಡ ಲಾಭ ಕೊಡುತ್ತದೆ.



