KITCHEN TIPS | ಅಡುಗೆಯ ರುಚಿ ಹೆಚ್ಚಿಸೋ ಶುಂಠಿನ ಮನೆಯಲ್ಲೇ ಬೆಳೆಸೋದು ಹೇಗೆ?

ಶುಂಠಿ, ಭಾರತೀಯ ಅಡುಗೆಗಳಲ್ಲಿ ಅತಿ ಹೆಚ್ಚು ಬಳಸುವ ಪ್ರಮುಖ ಮಸಾಲೆಗಳಲ್ಲಿ ಒಂದಾಗಿದೆ. ಮುಖ್ಯವಾಗಿ ನಾನ್‌ವೆಜ್‌ ತಯಾರಿಕೆಯಿಂದ ಹಿಡಿದು ಚಹಾ, ಉಪ್ಪಿನಕಾಯಿ, ಕೆಲವು ಮಿಠಾಯಿಗಳಲ್ಲೂ ಕೂಡ ಇದರ ಬಳಕೆ ಹೆಚ್ಚಾಗಿದೆ. ಆದರೆ ಯಾವಾಗಲೂ ಮಾರುಕಟ್ಟೆಯಲ್ಲಿ ಖರೀದಿಸಿ ಬಳಸಬೇಕೆಂದಿಲ್ಲ. ಈ ಮಸಾಲೆಯನ್ನು ನಾವು ಮನೆಯಲ್ಲೇ ಸಹಜವಾಗಿ ಬೆಳೆಸಬಹುದು. ಮನೆಯ ಹಿತಕರ ಪರಿಸರದಲ್ಲಿ ಪೋಷಣೆಯ ಅಗತ್ಯವಿರುವ ಈ ಗಿಡವನ್ನು ಬೆಳೆಯುವುದು ತುಂಬಾ ಸುಲಭ. ಇಲ್ಲಿದೆ ಅದರ ಸರಳ ವಿಧಾನ:

ಉತ್ತಮ ಗುಣಮಟ್ಟದ ಶುಂಠಿ ಆರಿಸಿ
ಸ್ಥಳೀಯ ದಿನಸಿ ಅಂಗಡಿಗಳಲ್ಲಿ ಅಥವಾ ರೈತರ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಾನಿಯಿಲ್ಲದ, ಹೊಸ ಮತ್ತು ಚಿಗುರು ಮೊಳಕೆಯೊಡೆದ ಶುಂಠಿಯ ಬೇರುಗಳನ್ನು ಆಯ್ಕೆಮಾಡಿ.

Germinated ginger root ready for planting in gardener´s hand. Detail of sprouted ginger root in the pot. grow ginger stock pictures, royalty-free photos & images

ನೀರಿನಲ್ಲಿ ನೆನೆಸಿರಿ
ಬೆಳೆಯುವ ಮೊದಲು, ಶುಂಠಿಯ ಬೇರುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ಇದು ಬೇಗನೆ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ.

ಸರಿಯಾದ ಗಾತ್ರದ ಮಡಕೆ ಆರಿಸಿ
ಬೀಳಲು ಬೆಳೆಯಲು ಅವಕಾಶ ನೀಡುವ ಅಗಲವಾದ ಮಡಕೆ ಅತ್ಯುತ್ತಮ. ಕನಿಷ್ಠ 12 ಇಂಚು ಅಗಲ ಮತ್ತು ಆಳವಿರುವ ಮಡಕೆಯೇ ಉತ್ತಮ. ನೀರು ನಿಲ್ಲದಂತೆ ರಂಧ್ರವಿರುವ ಮಡಕೆಯನ್ನು ಆಯ್ಕೆಮಾಡಬೇಕು.

ಸೂಕ್ತ ಮಣ್ಣು ಮತ್ತು ಕಾಂಪೋಸ್ಟ್ ಬಳಕೆ
ಚೆನ್ನಾಗಿ ನೀರು ಹರಿಯುವ ಮಣ್ಣಿಗೆ ಸ್ವಲ್ಪ ಸಾವಯವ ಗೊಬ್ಬರವನ್ನು ಸೇರಿಸಿ. ಮಡಕೆಯ ಮೇಲ್ಭಾಗದಲ್ಲಿ ಎರಡು ಇಂಚು ಖಾಲಿ ಜಾಗವಿಟ್ಟು ಮಣ್ಣು ತುಂಬಬೇಕು.

Person takes out ginger plants out of the flower pot, fresh ginger roots home gardening Person takes out ginger plants out of the flower pot, fresh ginger roots home gardening grow ginger stock pictures, royalty-free photos & images

ನೆಡುವ ವಿಧಾನ
ಶುಂಠಿಯ ಬೆರೆಗಳನ್ನು ಮಣ್ಣಿನ ಮೇಲ್ಭಾಗದಲ್ಲಿ ಇರಿಸಿ. ಅದರ ಕಣ್ಣುಗಳು ಮೇಲ್ಮುಖವಾಗಿರಲಿ. ಸುಮಾರು ಒಂದು ಇಂಚು ಮಣ್ಣಿನಿಂದ ಮುಚ್ಚಿ ನೀರು ಹಾಕಿ. ಶುಂಠಿಗೆ ಬೆಚ್ಚಗಿನ, ಆರ್ದ್ರವಾದ ಪರಿಸರ ಬೇಕಾಗಿರುವುದರಿಂದ, ಮಡಕೆಯನ್ನು ಪರೋಕ್ಷ ಸೂರ್ಯರಶ್ಮಿಯನ್ನು ಪಡೆಯುವ ಸ್ಥಳದಲ್ಲಿ ಇರಿಸಿ. ಮಣ್ಣು ತೇವವಿಲ್ಲದಂತೆ ನೋಡಿಕೊಳ್ಳಿ.

ವಸಂತ ಹಾಗೂ ಬೇಸಿಗೆಯ ವೇಳೆ ತಿಂಗಳಿಗೆ ಒಮ್ಮೆ ಸಮತೋಲಿತ ಗೊಬ್ಬರವನ್ನು ಹಾಕುವುದು ಉತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಮೊಳಕೆಯ ಚಿಗುರು ಹಾಗೂ ಕೊಯ್ಲು ಸಮಯ
ಶುಂಠಿ ಮೊಳಕೆ ಬರಲು ಕೆಲವಾರು ವಾರಗಳು ಬೇಕಾಗಬಹುದು. ಈ ಬಳಿಕ ಸುಮಾರು 8-10 ತಿಂಗಳ ನಂತರ ಎಲೆಗಳು ಹಳದಿಯಾಗಿ ಸಾಯಲಾರಂಭಿಸಿದರೆ, ಅದು ಕೊಯ್ಲಿಗೆ ಸಿದ್ಧವಿರುವ ಲಕ್ಷಣ. ಈ ಸಮಯದಲ್ಲಿ ಎಚ್ಚರಿಕೆಯಿಂದ ಬೇರು ತೆಗೆದು ಬೇಕಾದಷ್ಟನ್ನು ಬಳಸಿ, ಉಳಿದಿರುವ ಭಾಗವನ್ನು ಮತ್ತೆ ನೆಡಬಹುದು.

Agriculture Greenhouse A Bangladeshi male farmer is harvesting young ginger in agriculture greenhouse in Malaysia grow ginger stock pictures, royalty-free photos & images

ಶೇಖರಣೆ ವಿಧಾನ
ಕೊಯ್ಲು ಮಾಡಿದ ಶುಂಠಿಯನ್ನು ತಂಪಾದ, ಒಣ ಸ್ಥಳದಲ್ಲಿ ಅಥವಾ ರೆಫ್ರಿಜರೇಟರ್‌ನಲ್ಲಿ 3 ವಾರಗಳವರೆಗೆ ಶೇಖರಿಸಬಹುದು. ದೀರ್ಘಾವಧಿಯ ಶೇಖರಣೆಗೆ ಫ್ರೀಜ್ ಕೂಡ ಮಾಡಬಹುದು.

ಮನೆಯಲ್ಲಿ ಶುಂಠಿಯನ್ನು ಬೆಳೆಯುವುದು ಅಷ್ಟೇನು ಕಷ್ಟಕರವಲ್ಲ. ನೈಸರ್ಗಿಕವಾಗಿ ಬೆಳೆದ, ತಾಜಾ ಶುಂಠಿಯನ್ನು ನಿಮ್ಮ ಅಡುಗೆಗೆ ಬಳಸುವುದು ಆರೋಗ್ಯಕ್ಕೂ ಲಾಭ, ರುಚಿಗೂ ಖುಷಿ. ಈ ವಿಧಾನಗಳನ್ನು ಅನುಸರಿಸಿ, ನೀವು ವರ್ಷಪೂರ್ತಿ ಶುಂಠಿಯನ್ನು ಮನೆಬಳಕೆಗಾಗಿ ಸುಲಭವಾಗಿ ಬೆಳೆಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!