ಚಿಕನ್ ಖರೀದಿಸಿ ತಕ್ಷಣ ಅಡುಗೆ ಮಾಡಲು ಸಾಧ್ಯವಾಗದೇ ಕೆಲ ದಿನಗಳವರೆಗೆ ಇರಿಸಬೇಕಾದರೆ, ಅದರ ತಾಜಾತನ, ಪರಿಮಳ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ತಪ್ಪಾದ ಶೇಖರಣೆ ಕೇವಲ ರುಚಿಯನ್ನು ಹಾಳುಮಾಡುವುದಲ್ಲದೆ, ಆರೋಗ್ಯಕ್ಕೂ ಅಪಾಯವಾಗಬಹುದು. ಇಲ್ಲಿ ಚಿಕನ್‌ನ್ನು ಒಂದು ವಾರದವರೆಗೆ ತಾಜಾ ಇಡುವ ಕೆಲವು ಸುರಕ್ಷಿತ ವಿಧಾನಗಳಿವೆ.
ತಾಜಾ ಚಿಕನ್ ಆಯ್ಕೆ ಮಾಡುವುದು
ಚಿಕನ್ ತೆಗೆದುಕೊಳ್ಳುವಾಗ ಬಣ್ಣ, ವಾಸನೆ ಮತ್ತು ದಿನಾಂಕವನ್ನು ಗಮನಿಸಿ. ಚಿಕನ್ ಗುಲಾಬಿ ಬಣ್ಣದದಲ್ಲದಿದ್ದರೆ ಅಥವಾ ಕೆಟ್ಟ ವಾಸನೆ ಬರುತ್ತಿದ್ದರೆ ಖರೀದಿ ಮಾಡಬೇಡಿ.
ಮ್ಯಾರಿನೇಟ್ ಮಾಡಿ ರೆಫ್ರಿಜರೇಟರ್‌ನಲ್ಲಿಡಿ
ನಿಂಬೆರಸ, ಮೊಸರು ಅಥವಾ ವಿನೆಗರ್‌ನಂತಹ ಆಮ್ಲೀಯ ಪದಾರ್ಥಗಳಲ್ಲಿ ಚಿಕನ್‌ನ್ನು ಮ್ಯಾರಿನೇಟ್ ಮಾಡಿದರೆ ಬ್ಯಾಕ್ಟೀರಿಯಾ ಬೆಳವಣಿಗೆ ತಡೆಯಬಹುದು. ಆದರೆ ಇದನ್ನು 2-3 ದಿನಗಳೊಳಗೆ ಅಡುಗೆ ಮಾಡಬೇಕು.
ಶೈತ್ಯೀಕರಣದಿಂದ ತಾತ್ಕಾಲಿಕ ಶೇಖರಣೆ
ಚಿಕನ್‌ನ್ನು ಬಿಗಿಯಾಗಿ ಮುಚ್ಚಿ ಪ್ಲಾಸ್ಟಿಕ್ ರ್ಯಾಪ್ ಅಥವಾ ಬಾಕ್ಸ್‌ನಲ್ಲಿ 4°C (40°F) ತಾಪಮಾನದಲ್ಲಿ ಫ್ರಿಡ್ಜ್‌ನಲ್ಲಿ ಇಡಬಹುದು. ಈ ರೀತಿ 2 ದಿನಗಳವರೆಗೆ ಸುರಕ್ಷಿತವಾಗಿರುತ್ತದೆ.
ಫ್ರೀಜ್ ಮಾಡಿ ಶೇಖರಣೆ
ಫ್ರೀಜರ್‌ನಲ್ಲಿ 0°F (-18°C) ತಾಪಮಾನದಲ್ಲಿ ವ್ಯಾಕ್ಯೂಮ್ ಪ್ಯಾಕ್ ಮಾಡಿದ ಚಿಕನ್‌ನ್ನು 6 ತಿಂಗಳವರೆಗೆ ಉತ್ತಮ ಗುಣಮಟ್ಟದೊಂದಿಗೆ ಇರಿಸಬಹುದು. ಬಳಸುವ ಮುನ್ನ ರೂಮ್ ಟೆಂಪರೇಚರ್ ನಲ್ಲಿಟ್ಟು ಬಳಸಬೇಕು.
ಪಿಕ್ನಿಕ್‌ಗಾಗಿ ಐಸ್ ಪ್ಯಾಕ್ ಬಳಸಿ
ಹೊರ ಹೋಗುವಾಗ, ಚಿಕನ್‌ನ್ನು ಐಸ್ ಪ್ಯಾಕ್ ಇರುವ ಕೂಲರ್‌ಗಳಲ್ಲಿ ಇಟ್ಟು ತಂಪಾಗಿರಿಸಿ. ಮನೆಯಂತೆ ಶೇಖರಣೆ ಇಲ್ಲದಿದ್ದರೂ, ಕೆಲ ಗಂಟೆಗಳವರೆಗೆ ಇದು ತಾಜಾತನ ಕಾಪಾಡುತ್ತದೆ.