Saturday, December 27, 2025

Kitchen tips | ಸಬ್ಬಸಿಗೆ ಸೊಪ್ಪನ್ನು ತುಂಬಾ ದಿನ ಫ್ರೆಶ್ ಆಗಿಡೋದು ಹೇಗೆ?

ಅಡುಗೆಮನೆಯಲ್ಲಿ ಸಬ್ಬಸಿಗೆ ಸೊಪ್ಪಿನ (Dill Leaves) ವಾಸನೆ ಹರಡಿದರೆ ಊಟಕ್ಕೂ ಒಂದು ವಿಶೇಷ ರುಚಿ ಬರುತ್ತದೆ. ಆದರೆ ಈ ಸೊಪ್ಪು ಬೇಗನೆ ಒಣಗಿಬಿಡುವುದು, ಕಪ್ಪಾಗುವುದು ಬಹುತೇಕ ಮನೆಗಳಲ್ಲೂ ಸಾಮಾನ್ಯ ಸಮಸ್ಯೆ. ಮಾರುಕಟ್ಟೆಯಿಂದ ತಂದ ಮರುದಿನವೇ ಸೊಪ್ಪು ಬಾಡಿ ಹೋಗುವುದು ನೋಡಿ ಬೇಸರವಾಗುತ್ತೆ. ಸ್ವಲ್ಪ ಜಾಗ್ರತೆ, ಸರಿಯಾದ ಸಂಗ್ರಹಣಾ ವಿಧಾನಗಳಿದ್ದರೆ ಸಬ್ಬಸಿಗೆ ಸೊಪ್ಪನ್ನು ಹಲವು ದಿನಗಳವರೆಗೆ ಹಸಿರಾಗಿಯೇ ಇಟ್ಟುಕೊಳ್ಳಬಹುದು.

  • ತೊಳೆದ ತಕ್ಷಣ ಫ್ರಿಜ್‌ ನಲ್ಲಿ ಇಡಬೇಡಿ: ಸೊಪ್ಪನ್ನು ತೊಳೆದ ಬಳಿಕ ನೀರು ಸಂಪೂರ್ಣ ಒಣಗಿದ ಮೇಲೆ ಮಾತ್ರ ಸಂಗ್ರಹಿಸಬೇಕು. ತೇವಾಂಶ ಇದ್ದರೆ ಬೇಗ ಕೊಳೆಯುತ್ತದೆ.
  • ಹತ್ತಿ ಬಟ್ಟೆಯಲ್ಲಿ ಹೊದಿಸಿ ಇಡಿ: ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಸೊಪ್ಪನ್ನು ಸಡಿಲವಾಗಿ ಹೊದಿಸಿ ಏರ್‌ಟೈಟ್ ಡಬ್ಬಿಯಲ್ಲಿ ಇಟ್ಟರೆ ತಾಜಾತನ ಉಳಿಯುತ್ತದೆ.
  • ಪೇಪರ್ ಟವಲ್ ವಿಧಾನ: ಪೇಪರ್ ಟವಲ್‌ನಲ್ಲಿ ಸೊಪ್ಪನ್ನು ಮಡಚಿ ಜಿಪ್ ಲಾಕ್ ಕವರ್ ಅಥವಾ ಡಬ್ಬಿಯಲ್ಲಿ ಇಟ್ಟರೆ ಹೆಚ್ಚುವರಿ ತೇವಾಂಶ ಹೀರಿಕೊಳ್ಳುತ್ತದೆ.
  • ಕಡ್ಡಿಯೊಡನೆ ನೀರಿನಲ್ಲಿ ಇಡುವುದು: ಹೂವಿನಂತೆ, ಸೊಪ್ಪಿನ ಕಡ್ಡಿಯನ್ನು ಸ್ವಲ್ಪ ನೀರಿನಲ್ಲಿ ಇಟ್ಟು ಮೇಲೆ ಪ್ಲಾಸ್ಟಿಕ್ ಕವರ್ ಹಾಕಿ ಫ್ರಿಜ್‌ನಲ್ಲಿ ಇಡಬಹುದು.
  • Freeze ಮಾಡುವ ಆಯ್ಕೆಯೂ ಇದೆ: ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಏರ್‌ಟೈಟ್ ಡಬ್ಬಿಯಲ್ಲಿ Freeze ಮಾಡಿದರೆ ಹಲವು ದಿನ ಬಳಸಬಹುದು.

ಇದನ್ನೂ ಓದಿ:

error: Content is protected !!