ಮನೆಯಲ್ಲೇ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ತಯಾರಿಸೋದು ಆರೋಗ್ಯಕ್ಕೂ ಒಳ್ಳೆಯದು, ಅಡುಗೆಗೂ ಸುಲಭ. ಆದರೆ ಕೆಲವೇ ದಿನಗಳಲ್ಲಿ ವಾಸನೆ ಬರೋದು, ಬಣ್ಣ ಕಪ್ಪಾಗೋದು ಅಥವಾ ಹುಳಿ ಆಗೋದು ಬಹುತೇಕ ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಗ್ರತೆ ವಹಿಸಿದರೆ ಈ ಪೇಸ್ಟ್ ಅನ್ನು ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿ ಇಟ್ಟುಕೊಳ್ಳಬಹುದು.
- ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ಒಣಗಿಸಿಕೊಂಡ ನಂತರ ಮಾತ್ರ ಪೇಸ್ಟ್ ಮಾಡಬೇಕು. ನೀರಿನ ಅಂಶ ಉಳಿದರೆ ಪೇಸ್ಟ್ ಬೇಗ ಹಾಳಾಗುತ್ತೆ.
- ಪೇಸ್ಟ್ ತಯಾರಿಸಿದ ನಂತರ ಮೇಲ್ಭಾಗಕ್ಕೆ ಸ್ವಲ್ಪ ಎಣ್ಣೆ ಹಾಕಿ ಲೇಯರ್ ಮಾಡಿ. ಇದು ಗಾಳಿಯ ಸಂಪರ್ಕ ಕಡಿಮೆ ಮಾಡಿ ಫ್ರೆಶ್‌ನೆಸ್ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಪೇಸ್ಟ್ ಮಾಡುವಾಗ ಸ್ವಲ್ಪ ಉಪ್ಪು ಸೇರಿಸಿದರೆ ಅದು ನ್ಯಾಚುರಲ್ ಪ್ರಿಸರ್ವೇಟಿವ್ ಆಗಿ ಕೆಲಸ ಮಾಡುತ್ತದೆ.
- ಗಾಜಿನ ಬಾಟಲ್ ಬಳಸುವುದು ಉತ್ತಮ. ಪ್ಲಾಸ್ಟಿಕ್ ಡಬ್ಬಿಗಿಂತ ಗಾಜಿನ ಬಾಟಲ್‌ನಲ್ಲಿ ಪೇಸ್ಟ್ ಹೆಚ್ಚು ದಿನ ಚೆನ್ನಾಗಿ ಇರುತ್ತದೆ. ಫ್ರಿಡ್ಜ್‌ನಲ್ಲೇ ಇಡುವುದು ಉತ್ತಮ.
- ಪ್ರತಿ ಬಾರಿ ಪೇಸ್ಟ್ ತೆಗೆದುಕೊಳ್ಳುವಾಗ ಒಣ ಚಮಚ ಬಳಸಬೇಕು. ಒದ್ದೆ ಚಮಚ ಬಳಕೆ ಪೇಸ್ಟ್ ಬೇಗ ಹಾಳಾಗಲು ಕಾರಣವಾಗುತ್ತದೆ.
- ಹೆಚ್ಚು ಪ್ರಮಾಣದಲ್ಲಿ ಪೇಸ್ಟ್ ಮಾಡಿದರೆ ಐಸ್ ಟ್ರೇಗಳಲ್ಲಿ ಹಾಕಿ ಫ್ರೀಜ್ ಮಾಡಬಹುದು. ಬೇಕಾದಷ್ಟು ಮಾತ್ರ ಬಳಸಬಹುದು.
- ಈ ಸಣ್ಣ ಟಿಪ್ಸ್ ಫಾಲೋ ಮಾಡಿದರೆ ಮನೆಯಲ್ಲೇ ಮಾಡಿದ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹೆಚ್ಚು ದಿನ ಫ್ರೆಶ್ ಆಗಿ ಉಳಿಯುತ್ತದೆ.
ಇದನ್ನೂ ಓದಿ:



