October 19, 2026
Monday, October 19, 2026
spot_img

Kitchen Tips | ಮನೆಯಲ್ಲೇ ತಯಾರಿಸಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತುಂಬಾ ಟೈಮ್ ಫ್ರೆಶ್ ಅಗಿಟ್ಕೊಳೋದು ಹೇಗೆ?

ಮನೆಯಲ್ಲೇ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ತಯಾರಿಸೋದು ಆರೋಗ್ಯಕ್ಕೂ ಒಳ್ಳೆಯದು, ಅಡುಗೆಗೂ ಸುಲಭ. ಆದರೆ ಕೆಲವೇ ದಿನಗಳಲ್ಲಿ ವಾಸನೆ ಬರೋದು, ಬಣ್ಣ ಕಪ್ಪಾಗೋದು ಅಥವಾ ಹುಳಿ ಆಗೋದು ಬಹುತೇಕ ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಗ್ರತೆ ವಹಿಸಿದರೆ ಈ ಪೇಸ್ಟ್ ಅನ್ನು ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿ ಇಟ್ಟುಕೊಳ್ಳಬಹುದು.

  • ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ಒಣಗಿಸಿಕೊಂಡ ನಂತರ ಮಾತ್ರ ಪೇಸ್ಟ್ ಮಾಡಬೇಕು. ನೀರಿನ ಅಂಶ ಉಳಿದರೆ ಪೇಸ್ಟ್ ಬೇಗ ಹಾಳಾಗುತ್ತೆ.
  • ಪೇಸ್ಟ್ ತಯಾರಿಸಿದ ನಂತರ ಮೇಲ್ಭಾಗಕ್ಕೆ ಸ್ವಲ್ಪ ಎಣ್ಣೆ ಹಾಕಿ ಲೇಯರ್ ಮಾಡಿ. ಇದು ಗಾಳಿಯ ಸಂಪರ್ಕ ಕಡಿಮೆ ಮಾಡಿ ಫ್ರೆಶ್‌ನೆಸ್ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಪೇಸ್ಟ್ ಮಾಡುವಾಗ ಸ್ವಲ್ಪ ಉಪ್ಪು ಸೇರಿಸಿದರೆ ಅದು ನ್ಯಾಚುರಲ್ ಪ್ರಿಸರ್ವೇಟಿವ್ ಆಗಿ ಕೆಲಸ ಮಾಡುತ್ತದೆ.
  • ಗಾಜಿನ ಬಾಟಲ್ ಬಳಸುವುದು ಉತ್ತಮ. ಪ್ಲಾಸ್ಟಿಕ್ ಡಬ್ಬಿಗಿಂತ ಗಾಜಿನ ಬಾಟಲ್‌ನಲ್ಲಿ ಪೇಸ್ಟ್ ಹೆಚ್ಚು ದಿನ ಚೆನ್ನಾಗಿ ಇರುತ್ತದೆ. ಫ್ರಿಡ್ಜ್‌ನಲ್ಲೇ ಇಡುವುದು ಉತ್ತಮ.
  • ಪ್ರತಿ ಬಾರಿ ಪೇಸ್ಟ್ ತೆಗೆದುಕೊಳ್ಳುವಾಗ ಒಣ ಚಮಚ ಬಳಸಬೇಕು. ಒದ್ದೆ ಚಮಚ ಬಳಕೆ ಪೇಸ್ಟ್ ಬೇಗ ಹಾಳಾಗಲು ಕಾರಣವಾಗುತ್ತದೆ.
  • ಹೆಚ್ಚು ಪ್ರಮಾಣದಲ್ಲಿ ಪೇಸ್ಟ್ ಮಾಡಿದರೆ ಐಸ್ ಟ್ರೇಗಳಲ್ಲಿ ಹಾಕಿ ಫ್ರೀಜ್ ಮಾಡಬಹುದು. ಬೇಕಾದಷ್ಟು ಮಾತ್ರ ಬಳಸಬಹುದು.
  • ಈ ಸಣ್ಣ ಟಿಪ್ಸ್ ಫಾಲೋ ಮಾಡಿದರೆ ಮನೆಯಲ್ಲೇ ಮಾಡಿದ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹೆಚ್ಚು ದಿನ ಫ್ರೆಶ್ ಆಗಿ ಉಳಿಯುತ್ತದೆ.

ಇದನ್ನೂ ಓದಿ:

Must Read