ಅಡುಗೆ ಮನೆಯ ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳ ಮೇಲಿನ ಜಿಡ್ಡು ಸ್ವಚ್ಛಗೊಳಿಸುವುದು ಹಲವರಿಗೆ ದೊಡ್ಡ ತಲೆನೋವಾಗಬಹುದು. ಸಾಮಾನ್ಯವಾಗಿ ಸ್ಟೀಲ್ ಪಾತ್ರೆಗಳ ಮೇಲೆ ಜಿಡ್ಡು ಬೇಗನೆ ಹೋಗಿಬಿಡುತ್ತೆ, ಆದರೆ ಹಿತ್ತಾಳೆ ಮತ್ತು ತಾಮ್ರದ ವಸ್ತುಗಳು ಹೆಚ್ಚು ಸೂಕ್ಷ್ಮವಾಗಿರುತ್ತವೆ. ಹಾಗಾಗಿ, ಇವತ್ತು ಕೆಲವೆ ಸುಲಭ ವಸ್ತುಗಳನ್ನು ಬಳಸಿ ಹಿತ್ತಾಳೆ ಪಾತ್ರೆಗಳನ್ನು ಹೊಸದಾಗಿ ಹೊಳೆಯುವಂತೆ ಮಾಡಬಹುದು.

ಉಪ್ಪು-ನಿಂಬೆ ಟ್ರಿಕ್
ನಿಂಬೆಯನ್ನು ಎರಡು ತುಂಡುಗಳಾಗಿ ಕತ್ತರಿಸಿ, ಸ್ವಲ್ಪ ಉಪ್ಪನ್ನು ನಿಂಬೆಯ ಮೇಲೆ ಸಿಂಪಡಿಸಿ. ಹಿತ್ತಾಳೆ ಪಾತ್ರೆ ಮೇಲಿಂದ ನಿಧಾನವಾಗಿ ಉಜ್ಜಿ, ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ. ಈ ವಿಧಾನದಿಂದ ಪಾತ್ರೆಯ ಮೇಲಿನ ಜಿಡ್ಡು ಸುಲಭವಾಗಿ ಹೋಗುತ್ತದೆ.
ಹಿಟ್ಟು-ವಿನೆಗರ್ ಮಿಶ್ರಣ
ಬಿಳಿ ವಿನೆಗರ್ ಮತ್ತು ಹಿಟ್ಟನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಪಾತ್ರೆ ಮೇಲೆ ಹಚ್ಚಿ 15–20 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ. ನಂತರ ಬಿಸಿಲು ನೀರಿನಿಂದ ತೊಳೆಯಿರಿ.

ಹುಣಿಸೆ ಹಣ್ಣಿನ ರಸ
ಹುಣಿಸೆ ಹಣ್ಣನ್ನು ನೀರಿನಲ್ಲಿ ನೆನೆಸಿ, ರಸವನ್ನು ತೆಗೆದು ಹಿತ್ತಾಳೆ ಅಥವಾ ತಾಮ್ರದ ಪಾತ್ರೆ ಮೇಲೆ ಮೊದಲು ಸ್ವಲ್ಪ ಉಪ್ಪು ಹಚ್ಚಿ ನಂತರ ಹುಣಿಸೆ ಹಣ್ಣಿನ ರಸವನ್ನು ಬಳಸಿ ಉಜ್ಜಿ. ಕಲೆಗಳು ಸುಲಭವಾಗಿ ಹೋಗುತ್ತವೆ.
ಟೊಮೆಟೊ ಕೆಚಪ್ ಮತ್ತು ಡಿಟರ್ಜೆಂಟ್ ಬಳಕೆ
ಒಂದು ಪಾತ್ರೆಯಲ್ಲಿ ಬಿಸಿ ನೀರಿನಲ್ಲಿ ಡಿಟರ್ಜೆಂಟ್ ಮತ್ತು ಅರಿಶಿನ್ ಸೇರಿಸಿ, ಹಿತ್ತಾಳೆ ಪಾತ್ರೆಗಳನ್ನು ಹಾಕಿ ಕುದಿಸಿ. ನಂತರ ತಣ್ಣಗಾದ ನೀರಿನಲ್ಲಿ ತೊಳೆಯಿರಿ. ಟೊಮೆಟೊ ಕೆಚಪ್ ಕೂಡ ಹಿತ್ತಾಳೆ ಮೇಲಿನ ಜಿಡ್ಡು ತೆಗೆಯಲು ಸಹಾಯ ಮಾಡುತ್ತದೆ. ಬಟ್ಟೆ ಮೇಲೆ ಕೆಚಪ್ ಹಚ್ಚಿ 15 ನಿಮಿಷ ಹಿತ್ತಾಳೆ ಪಾತ್ರೆಗಳನ್ನು ಉಜ್ಜಿ, ನಂತರ ನೀರಿನಿಂದ ತೊಳೆಯಿರಿ.

ಆಲಿವ್ ಎಣ್ಣೆ-ವಿನೆಗರ್ ಸ್ಪ್ರೇ
ಆಲಿವ್ ಎಣ್ಣೆ ಮತ್ತು ವಿನೆಗರ್ ಸಮಾನ ಪ್ರಮಾಣದಲ್ಲಿ ಸ್ಪ್ರೇ ಬಾಟಲಿಯಲ್ಲಿ ಮಿಶ್ರಣ ಮಾಡಿ ಹಿತ್ತಾಳೆ ಮೇಲಿಗೆ ಸಿಂಪಡಿಸಿ. ಬಟ್ಟೆಯಿಂದ ಉಜ್ಜಿದರೆ, ಕಲೆಗಳು ಸುಲಭವಾಗಿ ಹೋಗುತ್ತವೆ.