ಆರೋಗ್ಯಪೂರ್ಣ ಆಹಾರವಾಗಿ ಖ್ಯಾತಿ ಗಳಿಸಿರುವ ಓಟ್ಸ್ ಅನ್ನು ಇಂದು ಹೆಚ್ಚಿನವರು ದಿನನಿತ್ಯ ಬಳಸುತ್ತಿದ್ದಾರೆ. ಫೈಬರ್ ಮತ್ತು ಪೌಷ್ಟಿಕಾಂಶದಿಂದ ಪರಿಪೂರ್ಣವಾಗಿರುವ ಈ ಆಹಾರವನ್ನು ಬಹುಪಾಲು ಜನರು ಹೆಚ್ಚು ಪ್ರಮಾಣದಲ್ಲಿ ಖರೀದಿಸಿ ಮನೆಗೆ ಸಂಗ್ರಹಿಸುತ್ತಾರೆ. ಆದರೆ, ಸರಿಯಾದ ಶೇಖರಣೆ ಇಲ್ಲದಿದ್ದರೆ ಓಟ್ಸ್ ಕೂಡ ಬೇಗನೆ ಕೆಡಬಹುದು ಎಂಬುದು ನಿಜ.
ಓಟ್ಸ್ ಅನ್ನು ಹೆಚ್ಚು ದಿನಗಳವರೆಗೆ ತಾಜಾ, ಸುರಕ್ಷಿತ ಹಾಗೂ ಸೇವನಾರ್ಹವಾಗಿರಿಸಲು ಕೆಲವು ಸಿಂಪಲ್ ಟಿಪ್ಸ್ ಇಲ್ಲಿದೆ.
ಗಾಳಿಯಾಡದ ಡಬ್ಬುಗಳಲ್ಲಿ ಶೇಖರಣೆ
ಓಟ್ಸ್ ನ ಪೋಷಕಾಂಶ ಮತ್ತು ರುಚಿಯನ್ನು ಕಾಯ್ದುಕೊಳ್ಳಲು ಗಾಳಿಯಾಡದ ಜಾರ್ ಗಳನ್ನು ಬಳಸುವುದು ಉತ್ತಮ. ಹೀಗೆ ಮಾಡುವುದರಿಂದ ತೇವಾಂಶ ಮತ್ತು ಕೀಟಗಳಿಂದ ರಕ್ಷಣೆ ಸಿಗುತ್ತದೆ.
ತಂಪಾದ ಹಾಗೂ ಒಣ ಸ್ಥಳದಲ್ಲಿಯೇ ಇಡಿ
ಸೂಪರ್‌ಮಾರ್ಕೆಟ್‌ನಲ್ಲಿ ಅಥವಾ ಮನೆಯ ಪ್ಯಾಂಟ್ರಿಯ ತಂಪಾದ, ಶಾಖರಹಿತ, ನೇರ ಸೂರ್ಯನ ಬೆಳಕು ತಲುಪದ ಸ್ಥಳವೇ ಓಟ್ಸ್ ಶೇಖರಣೆಗೆ ಸೂಕ್ತ. 10–21 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶೇಖರಿಸಿದರೆ ಓಟ್ಸ್ ಹೆಚ್ಚು ದಿನಗಳು ಹಾಳಾಗದೆ ಇರುತ್ತವೆ.
ಫ್ರೀಜರ್‌ನಲ್ಲಿ ಶೇಖರಿಸಿ
ಅತಿ ಹೆಚ್ಚು ಪ್ರಮಾಣದ ಓಟ್ಸ್ ಖರೀದಿಸಿದರೆ ಅದನ್ನು ಫ್ರೀಜರ್‌ನಲ್ಲಿ ಗಾಳಿಯಾಡದಂತ ಪ್ಯಾಕ್‌ನಲ್ಲಿ ಇಡುವುದು ಉತ್ತಮ. ಹೀಗೆ ಶೇಖರಿಸಿದರೆ ಒಂದು ವರ್ಷವರೆಗೆ ಕೂಡ ಓಟ್ಸ್ ತಾಜಾ ಉಳಿಯುವ ಸಾಧ್ಯತೆ ಇದೆ. ಉಪಯೋಗಿಸುವ ಮುನ್ನ ಸಾಮಾನ್ಯ ತಾಪಮಾನದಲ್ಲಿ ಸ್ವಲ್ಪ ಹೊತ್ತು ಇರಿಸಿ ಬಳಕೆ ಮಾಡಬಹುದು.
ಓಟ್ಸ್ ಮೇಲೆ ಕೀಟಗಳು ಅಥವಾ ಹುಳುಗಳು ಬಂದಿವೆಯೇ ಎಂದು ನಿಯಮಿತವಾಗಿ ಪರಿಶೀಲನೆ ಮಾಡಬೇಕು. ಕೆಟ್ಟ ವಾಸನೆ, ಬಣ್ಣ ಬದಲಾವಣೆ, ಕೀಟಗಳ ಕಂಡುಬಂದರೆ ತಕ್ಷಣವೇ ಬಳಸುವುದನ್ನು ನಿಲ್ಲಿಸಿ.