Friday, November 21, 2025

Kitchen tips | ಅಡುಗೆ ಮನೆಯ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ರೆ ಈ ರೀತಿ ತೆಗೆದುಬಿಡಿ!

ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೆಲವೊಮ್ಮೆ ಮಹಿಳೆಯರಿಗೆ ದೊಡ್ಡ ತಲೆನೋವಿನ ಕೆಲಸ. ಅಡುಗೆ ಮಾಡುವಾಗ ಎಣ್ಣೆ, ಸಾಂಬಾರು, ಪಲ್ಯ ಪದಾರ್ಥಗಳು ಗೋಡೆ ಮತ್ತು ಟೈಲ್ಸ್ ಮೇಲೆ ಚಿಮ್ಮಿ ಕಲೆಗಳನ್ನು ಬಿಟ್ಟಿಟ್ಟು ಹೋಗುತ್ತವೆ. ಈ ಕಲೆಗಳು ತಕ್ಷಣ ತೊಳೆದರೆ ಸುಲಭವಾಗಿ ಹೋಗುತ್ತವೆ, ಆದರೆ ಕೆಲವು ಸಮಯದ ನಂತರ ಜಿಡ್ಡಿನ ಕಲೆಗಳಾಗಿ ಉಳಿಯುತ್ತವೆ. ಇವುಗಳನ್ನು ಸ್ವಚ್ಛಗೊಳಿಸಲು ಹಲವು ಸುಲಭ ಮಾರ್ಗಗಳಿವೆ.

  • ಉಪ್ಪು ನೀರು: ಎಣ್ಣೆಯಿರುವ ಜಾಗವನ್ನು ಉಪ್ಪು ನೀರಿನಿಂದ ತಿಕ್ಕಿದರೆ ಕೆಲವೊಮ್ಮೆ ಕಲೆಗಳು ಸುಲಭವಾಗಿ ಹೋಗುತ್ತವೆ.
  • ಅಡುಗೆ ಸೋಡಾ: ಅಡುಗೆ ಸೋಡಾ ಬಳಸಿ ಸ್ವಚ್ಛಗೊಳಿಸುವುದು ಜಿಡ್ಡು ಕಲೆಗಳನ್ನು ತೆಗೆಯಲು ಇದು ಪರಿಣಾಮಕಾರಿ.
  • ಟೂತ್ ಪೇಸ್ಟ್: ಎಣ್ಣೆ ಕಲೆಯ ಮೇಲೆ ಪೇಸ್ಟ್ ಹಾಕಿ ಐದು ನಿಮಿಷವರೆಗೆ ಬಿಡಿ, ನಂತರ ಉಜ್ಜಿ ತೊಳೆಯಿರಿ.
  • ಹೇರ್ ಡ್ರೈಯರ್: ಎಣ್ಣೆಯ ಮೇಲೆ ಕಾಗದ ಇಟ್ಟು ಡ್ರೈಯರ್ ನಿಂದ ಬಿಸಿ ಗಾಳಿ ಹಾಕಿ ನಂತರ ಉಜ್ಜುವುದರಿಂದ ಕಲೆ ಮಾಯವಾಗುತ್ತದೆ.
  • ನಿಂಬೆ ಮತ್ತು ವಿನೆಗರ್ ಮಿಶ್ರಣ: ಬೆಚ್ಚಗಿನ ನೀರಿನಲ್ಲಿ ಈ ಮಿಶ್ರಣ ಕಲಸಿ ತಿಕ್ಕಿ ತೊಳೆಯುವುದರಿಂದ ಗೋಡೆ ಹೊಳೆಯುತ್ತದೆ.
  • ಲಿಕ್ವಿಡ್ ಡಿಶ್ ವಾಶ್: ಗೋಡೆಯ ಮೇಲೆ ಸ್ಪ್ರೇ ಮಾಡಿ ಒಂದು ಗಂಟೆ ಬಿಟ್ಟು, ನಂತರ ಬಟ್ಟೆ ಮೂಲಕ ಒರೆಸಿದರೆ ಎಲ್ಲ ಕಲೆಗಳು ಹೋಗುತ್ತವೆ.
error: Content is protected !!