ಇತ್ತೀಚಿನ ದಿನಗಳಲ್ಲಿ ಕಬ್ಬಿಣದ ಪಾತ್ರೆಗಳ ಬಳಕೆ ಮತ್ತೆ ಜನಪ್ರಿಯವಾಗಿದೆ. ಆರೋಗ್ಯಕರ ಆಯ್ಕೆ ಎಂಬ ಕಾರಣಕ್ಕೆ ಅನೇಕರು ನಾನ್‌ಸ್ಟಿಕ್ ಪಾತ್ರೆಗಳ ಬದಲು ಕಬ್ಬಿಣದ ಕುಕ್ಕರ್, ತವ, ಉಕ್ಕಳ ಮುಂತಾದವುಗಳನ್ನು ಬಳಸುತ್ತಿದ್ದಾರೆ. ಆದರೆ, ಈ ಪಾತ್ರೆಗಳನ್ನು ತೊಳೆಯುವಾಗ ಎಚ್ಚರಿಕೆಯಿಂದಿರಲೇಬೇಕಾಗುತ್ತದೆ. ಸರಿಯಾದ ಜ್ಞಾನವಿಲ್ಲದೆ ಮಾಡಿದ ಕೆಲವೊಂದು ಸಾಮಾನ್ಯ ತಪ್ಪುಗಳು ಪಾತ್ರೆಯ ಆಯುಷ್ಯವನ್ನೇ ಕಿತ್ತುಕೊಳ್ಳಬಹುದು.
ಸಾಬೂನು ಅಥವಾ ಡಿಟರ್ಜೆಂಟ್ ಹೆಚ್ಚು ಬಳಸುವುದು
ಕಬ್ಬಿಣದ ಪಾತ್ರೆಗೆ ತೈಲದ ಮೂಲ ಪದರ (seasoning) ಇರಬೇಕು. ಹೆಚ್ಚು ಸಾಬೂನು ಅಥವಾ ರಾಸಾಯನಿಕ ದ್ರವ್ಯ ಬಳಸಿದರೆ ಈ ಪದರ ಕೊಂಚಕೊಂಚವಾಗಿ ಕಳೆದು ಹೋಗುತ್ತದೆ, ಇದು ಪಾತ್ರೆಯ ಮೇಲೆ ತುಕ್ಕು ಹಿಡಿಯಲು ಕಾರಣವಾಗಬಹುದು.
ನೀರಿನಲ್ಲಿ ಹೆಚ್ಚು ಹೊತ್ತು ನೆನೆಸಿಡುವುದು
ಕಬ್ಬಿಣದ ಪಾತ್ರೆಯನ್ನು ಗಂಟೆಗಳ ಕಾಲ ನೀರಿನಲ್ಲಿ ಇಡೋದು ತುಂಬಾ ಹಾನಿಕಾರಕ. ಇದು ನೀರನ್ನು ಬೇಗನೆ ಹೀರಿಕೊಳ್ಳುವುದರಿಂದ ತಕ್ಷಣವೇ ತುಕ್ಕು ಹಿಡಿಯಲು ಪ್ರ್ರಾರಂಭವಾಗುತ್ತೆ.
ಡಿಶ್‌ವಾಷರ್‌ನಲ್ಲಿ ಹಾಕುವುದು
ಕಬ್ಬಿಣದ ಪಾತ್ರೆಗಳು ಡಿಶ್‌ವಾಷರ್ ಗೆ ಸೂಕ್ತವಲ್ಲ. ಅದು ತೀವ್ರ ರೀತಿಯಲ್ಲೂ ಪಾತ್ರೆಗಳನ್ನು ಶುದ್ಧ ಮಾಡುವುದರಿಂದ ಪಾತ್ರೆಯ ಮೇಲ್ಮೈ ಕೋಟಿಂಗ್ ಹಾಳಾಗುತ್ತದೆ.
ತೊಳೆಯಲು ಗಡುಸಾದ ಬ್ರಷ್ ಬಳಸುವುದು
ಇವು ಪಾತ್ರೆಯ ಮೇಲಿನ ಸೀಸನಿಂಗ್ ಪದರವನ್ನು ತೆಗೆದುಹಾಕುತ್ತದೆ. ಇದರ ಬದಲಿಗೆ ಮೃದುವಾದ ಸ್ಪಾಂಜ್ ಅಥವಾ ನೀರಿನಲ್ಲಿ ನೆನೆಸಿದ ಟವಲ್ ಬಳಸುವುದು ಹೆಚ್ಚು ಸೂಕ್ತ.
ಒಣಗಿಸದೇ ಬಿಟ್ಟು ಬಿಡುವುದು
ಕಬ್ಬಿಣದ ಪಾತ್ರೆ ತೊಳೆದ ನಂತರ ಕೂಡಲೇ ಒಣಗಿಸಬೇಕು. ನೀರು ಉಳಿದರೆ ತುಕ್ಕು ಹಿಡಿಯಲು ಪ್ರಾರಂಭವಾಗುತ್ತದೆ. ಬಿಸಿನೀರಿನಲ್ಲಿ ತೊಳೆಯುವುದೂ ಕೂಡ ಒಳ್ಳೆಯ ಅಭ್ಯಾಸ.
ಕಬ್ಬಿಣದ ಪಾತ್ರೆ ಸರಿಯಾಗಿ ನೋಡಿಕೊಂಡರೆ ದಶಕಗಳವರೆಗೆ ಬಳಸಬಹುದಾದ, ಆರೋಗ್ಯಕರ ಮತ್ತು ನೈಸರ್ಗಿಕ ಆಯ್ಕೆ. ಆದರೆ ತೊಳೆಯುವ ಸಂದರ್ಭದಲ್ಲಿ ಮಾಡಿದ ಸಣ್ಣ ತಪ್ಪುಗಳು ದೀರ್ಘಕಾಲಿಕ ಹಾನಿಗೆ ಕಾರಣವಾಗಬಹುದು.