KITCHEN TIPS | ಚಿಕನ್ ಫ್ರೆಶ್ ಇದ್ಯಾ? ಇಲ್ವಾ? ಅಂತ ತಿಳ್ಕೊಳೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಅಡುಗೆ ಮಾಡೋವಾಗ ಎಲ್ಲ ಪದಾರ್ಥಗಳು ತಾಜಾ ಆಗಿದ್ರೆ ಅದರ ರುಚಿನೇ ಬೇರೆ. ಅದು ಮಾಂಸಾಹಾರ ಆಗಿರ್ಲಿ ಅಥವಾ ತರಕಾರಿ ಆಗಿರ್ಲಿ ಎಲ್ಲವು ಫ್ರೆಶ್ ಬೇಕು. ಆದ್ರೆ ಈ ಮಾಂಸಾಹಾರ ಅಂಗಡಿಗಳಲ್ಲಿ ಮುಖ್ಯವಾಗಿ ಚಿಕನ್ ಖರೀದಿ ಮಾಡೋವಾಗ ಅಂಗಡಿಯಲ್ಲಿ ಹಳೆಯ ಕೋಳಿಯನ್ನು ತಾಜಾ ಎಂದು ಮಾರಾಟ ಮಾಡುತ್ತಾರೆ. ರೀತಿಯಾದಾಗ ನಾವು ತಯಾರಿಸೋ ಗ್ರೇವಿ ಅಥವಾ ಫ್ರೈ ಅಥವಾ ಯಾವುದೇ ಅಡುಗೆ ಇರ್ಲಿ ಅದು ರುಚಿಯಾಗಿ ಬರೋದಿಲ್ಲ.

ಇಂತಹ ಸಂದರ್ಭದಲ್ಲಿ, ಗ್ರಾಹಕರು ತಾವು ಖರೀಸುವ ಮಾಂಸದ ಗುಣಮಟ್ಟವನ್ನು ಗುರುತಿಸುವುದು ಅನಿವಾರ್ಯ. ಅದು ಹೇಗೆ ಗೊತ್ತ?

ವಾಸನೆ:
ತಾಜಾ ಕೋಳಿ ಮಾಂಸದಲ್ಲಿ ಯಾವುದೇ ತೀವ್ರ ವಾಸನೆ ಇರುವುದಿಲ್ಲ. ಇದು ಸೌಮ್ಯ ಅಥವಾ ತಣ್ಣಗಿನಂತಹ ವಾಸನೆಯಿರುತ್ತದೆ. ಆದರೆ ದುರ್ಗಂಧವಾದ ವಾಸನೆ ಬಂದರೆ ಅದು ಹಳೆಯ ಮಾಂಸವಾಗಿರಬಹುದು. ಅಂಗಡಿಗೆ ಹೋಗಿ ನಿಮ್ಮ ಮುಂದೆ ಚಿಕನ್ ಕಟ್ ಮಾಡಲು ಕೇಳುವುದು ಉತ್ತಮ.

ACMF Australian chicken meat federation

ಬಣ್ಣ:
ತಾಜಾ ಮಾಂಸವು ತಿಳಿ ಗುಲಾಬಿ ಬಣ್ಣದಲ್ಲಿರುತ್ತದೆ. ಹಳೆಯ ಮಾಂಸದ ಬಣ್ಣ ಕಂದು ಅಥವಾ ಮಸುಕಾಗಿದ್ದರೆ ಅದು ಹಳೆ ಮಾಂಸ.

Chicken-Meat Images – Browse 57 Stock Photos, Vectors, and Video | Adobe  Stock

ಪ್ಯಾಕ್ ಮಾಡಿದ ಚಿಕನ್ ಬಗ್ಗೆ ಎಚ್ಚರಿಕೆ:
ಪ್ಯಾಕ್ ಮಾಡಿದ ಚಿಕನ್‌ ಖರೀದಿಸುವ ಮೊದಲು ಅದರ ತಯಾರಿಕಾ ದಿನಾಂಕ ಮತ್ತು ಮುಕ್ತಾಯ ದಿನಾಂಕ ಚೆಕ್ ಮಾಡಿ. ಕೆಲವು ಅಂಗಡಿಕಾರರು ಎಕ್ಸ್‌ಪೈರಿ ಡೇಟ್‌ ಬದಲಾಯಿಸಿ ಹೊಸದಾಗಿ ಮಾರಾಟ ಮಾಡುವ ಪ್ರಕರಣಗಳೂ ವರದಿಯಾಗಿವೆ. ಪ್ಯಾಕೆಟ್‌ ತೆರೆಯುತ್ತಿದ್ದಾಗ ದುರ್ಗಂಧ ಬಂದರೆ ಅದು ಹಳೆ ಮಾಂಸ ಎಂದರ್ಥ.

meat in food store . Woman choosing packed fresh chicken meat in supermarket meat in food store . Woman choosing packed fresh chicken meat in supermarket . Chicken Fresh? Or Not stock pictures, royalty-free photos & images

ಈ ಅಂಶಗಳು ತಾಜಾ ಕೋಳಿ ಖರೀದಿಸಲು ನಿಮಗೆ ಸಹಾಯ ಮಾಡಬಹುದು. ತಾಜಾ ಚಿಕನ್ ಉಪಯೋಗಿಸಿದರೆ ಆಹಾರ ರುಚಿಕರವಾಗುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!