kitchen Tips | ಪ್ರೆಶರ್ ಕುಕ್ಕರ್ ಬಣ್ಣ ಮಾಸಿ ಹೋಗಿ, ಕಲೆಗಳು ಹೆಚ್ಚಾಗಿದ್ಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ನೋಡಿ

ಪ್ರೆಶರ್ ಕುಕ್ಕರ್‌ಅನ್ನು ಪ್ರತಿದಿನದ ಅಡುಗೆಗಾಗಿ ಬಳಸಿದರೆ, ಅದರಲ್ಲಿ ಎಣ್ಣೆ ಅಂಶ, ಆಹಾರದ ಸಣ್ಣ ಕಣಗಳು, ಮತ್ತು ಕಪ್ಪು ಕಲೆಗಳು ಉಂಟಾಗಬಹುದು. ಕುಕ್ಕರ್‌ನ ಸ್ವಚ್ಛವಾಗಿ ಇಟ್ಟುಕೊಂಡ್ರೆ
ಅದರ ಆಯಸ್ಸು ಜಾಸ್ತಿಯಾಗುತ್ತದೆ ಮತ್ತು ಆಹಾರವೂ ಸುರಕ್ಷಿತವಾಗಿರುತ್ತದೆ.

ಲಿಂಬೆಹಣ್ಣಿನ ರಸ ಮತ್ತು ಬೇಕಿಂಗ್ ಸೋಡಾ
ಒಂದು ಲಿಂಬಿನ ರಸ ಮತ್ತು ಒಂದು ಟೀಚಮಚ ಬೇಕಿಂಗ್ ಸೋಡಾವನ್ನು ಕುಕ್ಕರ್‌ಗೆ ಹಾಕಿ ಬೆರಸಿ ಅರ್ಧಗಂಟೆ ಬಿಡಿ. ನಂತರ ಸ್ಪಾಂಜ್‌ನಿಂದ ಉಜ್ಜಿ ತೊಳೆಯಿರಿ. ಇದರಿಂದ ಕಲೆಗಳು ಮತ್ತು ದುರ್ವಾಸನೆ ಹೋಗುತ್ತದೆ.

The Benefits of Baking Soda & Lemon Juice - Rejuvage

ಉಪ್ಪು ಬಳಸಿ
ಕುಕ್ಕರ್‌ನ ತಳದಲ್ಲಿ ಕಪ್ಪು ಬಣ್ಣದ ಕಲೆಗಳಿದ್ದರೆ, ಅಲ್ಲಿ ಉಪ್ಪು ಹಚ್ಚಿ ಸ್ಪಾಂಜ್‌ನಿಂದ ಉಜ್ಜಿ ಸುತ್ತಲೂ ಒತ್ತಿ ತೊಳೆಯಿರಿ. ಉಪ್ಪು ಕಲೆಗಳನ್ನು ತ್ವರಿತವಾಗಿ ಹೋಗುತ್ತದೆ.

Cooker Cake, How to Make Cake in Pressure Cooker - Swasthi's Recipes

ಗ್ಯಾಸ್ಕೆಟ್ ಅನ್ನು ತೆಗೆದು ಶುದ್ಧಗೊಳಿಸುವುದು
ಕುಕ್ಕರ್‌ನ ರಬ್ಬರ್ ಗ್ಯಾಸ್ಕೆಟ್ (ಸೀಲ್) ಅನ್ನು ಪ್ಲೇನ್ ವಾಟರ್ ಅಥವಾ ಸೋಪ್ ನಿಂದ ತೊಳೆದು, ಪೂರ್ಣವಾಗಿ ಒಣಗಿದ ಮೇಲೆ ಮಾತ್ರ ಮತ್ತೆ ಬಳಸುವುದು ಉತ್ತಮ. ಇಲ್ಲವಾದರೆ ದುರ್ವಾಸನೆ ಅಥವಾ ಬ್ಯಾಕ್ಟೀರಿಯಾ ಉತ್ಪತ್ತಿಯಾಗಬಹುದು.

Custom Food-Grade Silicone Rubber Gasket O-Ring Sealing Ring for Pressure  Cooker

ವಾರಕ್ಕೊಮ್ಮೆ ಸಂಪೂರ್ಣ ಶುದ್ಧೀಕರಣ
ವಾರದ ಯಾವುದೇ ದಿನ ನೀವು ಕುಕ್ಕರ್ ಅನ್ನು ಲಿಂಬೆಹಣ್ಣಿನ ರಸ, ಬೇಕಿಂಗ್ ಸೋಡಾ, ಉಪ್ಪು ಬೆರೆಸಿ ಕುಕ್ಕರ್ ಅನ್ನು ಸ್ವಲ್ಪ ಬಿಸಿ ಮಾಡಿ ನಂತರ ತಣ್ಣಗಾದ ನಂತರ ಚೆನ್ನಾಗಿ ತೊಳೆಯಿರಿ. ಇದು ಸಾಮಾನ್ಯ ಕಲೆಗಳನ್ನೂ ಕೂಡ ತೆಗೆದುಹಾಕುತ್ತದೆ.

How to Clean a Pressure Cooker - Step by Step (with Pictures) | Cleanipedia

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!