ಅಡುಗೆಮನೆಯಲ್ಲಿ ಚಾಕು ಅತ್ಯಂತ ಮುಖ್ಯವಾದ ಸಾಧನಗಳಲ್ಲಿ ಒಂದು. ಸಾಮಾನ್ಯವಾಗಿ ಚಾಕು ಎಂದರೆ ತರಕಾರಿಗಳನ್ನು ಕತ್ತರಿಸುವ ಸಾಧನವೆಂದು ಅನೇಕರು ಭಾವಿಸುತ್ತಾರೆ. ಆದರೆ ನಿಜ ಹೇಳುವುದಾದರೆ, ಅಡುಗೆಮನೆಯಲ್ಲಿ ಬಳಸುವ ಚಾಕುಗಳು ಹಲವು ವಿಧಗಳಾಗಿವೆ. ಹಣ್ಣುಗಳನ್ನು ಸ್ಲೈಸ್ ಮಾಡಲು, ಮಾಂಸವನ್ನು ಕತ್ತರಿಸಲು, ಕೇಕ್ ಅಥವಾ ಚೀಸ್ ಹಂಚಿಕೊಳ್ಳಲು ಪ್ರತ್ಯೇಕ ಚಾಕುಗಳಿವೆ. ಸರಿಯಾದ ಚಾಕುವಿನ ಬಳಕೆಯಿಂದ ಅಡುಗೆ ಸುಲಭವಾಗುತ್ತದೆ ಮತ್ತು ಕೆಲಸದಲ್ಲಿ ವೇಗ ಬರುತ್ತದೆ. ಹಾಗಾದರೆ ಅಡುಗೆಮನೆಯಲ್ಲಿ ನೀವು ಹೊಂದಿರಲೇಬೇಕಾದ 12 ವಿಧದ ಚಾಕುಗಳ ವಿವರ ಇಲ್ಲಿದೆ.
ಚೀಸ್ ನೈಫ್
ಚೀಸ್ ಕತ್ತರಿಸಲು ವಿಶೇಷವಾಗಿ ವಿನ್ಯಾಸಗೊಂಡಿರುವ ಚಾಕು. ಎಲ್ಲಾ ವಿಧದ ಚೀಸ್ ಕಟ್ ಮಾಡಲು ಉಪಯುಕ್ತ.
ಫಿಶ್ ನೈಫ್
ಮೀನುಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸುಲಭವಾಗಿ ಕತ್ತರಿಸಲು ಈ ತೆಳುವಾದ ಚಾಕು ಬಳಕೆಯಾಗುತ್ತದೆ.
ಫ್ರೂಟ್ಸ್ ನೈಫ್
ಚಿಕ್ಕ ಮತ್ತು ಆರಾಮದಾಯಕ ಹಿಡಿತವಿರುವ ಚಾಕು. ಹಣ್ಣುಗಳನ್ನು ಸಲೀಸಾಗಿ ಕತ್ತರಿಸಲು ಅನುಕೂಲ.
ಕರಿ ನೈಫ್
ಮಾಂಸವನ್ನು ವಿಶೇಷವಾಗಿ ಸುಲಭವಾಗಿ ಕತ್ತರಿಸಲು ಬಳಸುವ ಬಲವಾದ ಚಾಕು ಇದು.
ಬಟರ್ ನೈಫ್
ಮಂದ ಬ್ಲೇಡ್ ಹೊಂದಿರುವ ಈ ಚಾಕು ಬ್ರೆಡ್ ಮೇಲೆ ಬೆಣ್ಣೆ, ಜಾಮ್ ಅಥವಾ ಕ್ರೀಂ ಹಚ್ಚಲು ಸರಿಯಾಗಿದೆ.
ಪ್ಯಾರಿಂಗ್ ನೈಫ್
ಸಣ್ಣ ಬ್ಲೇಡ್ ಹೊಂದಿದ್ದು, ಹಣ್ಣು-ತರಕಾರಿಗಳ ಸಿಪ್ಪೆ ಬಿಡಿಸಲು ಅತಿ ಉಪಯುಕ್ತ.
ಕೇಕ್ ಕಟ್ಟರ್
ಕೇಕ್ ಹಾಗೂ ಮೃದು ವಸ್ತುಗಳನ್ನು ಕತ್ತರಿಸಲು ಬಳಸುವ ಅಗಲವಾದ ಚಾಕು.
ಸ್ಯಾಂಟೋಕು ನೈಫ್
ಜಪಾನ್ ಮೂಲದ ಈ ಚಾಕು ಬಹುಮುಖಿ ಉಪಯೋಗಕ್ಕೆ ಪ್ರಸಿದ್ಧ. ತರಕಾರಿ, ಹಣ್ಣು, ಮಾಂಸ ಎಲ್ಲವನ್ನೂ ಕತ್ತರಿಸಲು ಸಾಧ್ಯ.
ಸ್ಟೀಕ್ ನೈಫ್
ತೀಕ್ಷ್ಣ ತುದಿಯುಳ್ಳ ಚಾಕು. ಮಾಂಸಾಹಾರ ಕತ್ತರಿಸಿಕೊಂಡು ತಿನ್ನಲು ಸೂಕ್ತ.
ವೆಜಿಟೇಬಲ್ ನೈಫ್
ತರಕಾರಿಗಳನ್ನು ಕತ್ತರಿಸಲು ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಕಾಣುವ ಸಾಮಾನ್ಯ ಚಾಕು.
ಕ್ರವಿಂಗ್ ನೈಫ್
ಕೆತ್ತನೆ ಅಥವಾ ಸಂಕೀರ್ಣ ಪದಾರ್ಥಗಳನ್ನು ಕತ್ತರಿಸಲು ಬಳಸುವ ವಿಶೇಷ ಚಾಕು.
ಅಡುಗೆಮನೆಯಲ್ಲಿ ಸರಿಯಾದ ಚಾಕುಗಳನ್ನು ಬಳಸುವುದರಿಂದ ಸಮಯ ಉಳಿತಾಯವಾಗುವುದಲ್ಲದೆ ಅಡುಗೆಯ ಗುಣಮಟ್ಟವೂ ಹೆಚ್ಚುತ್ತದೆ. ಪ್ರತಿಯೊಂದು ಚಾಕು ತನ್ನದೇ ಆದ ಉಪಯೋಗವನ್ನು ಹೊಂದಿರುವುದರಿಂದ, ಕನಿಷ್ಠ ಈ 12 ವಿಧದ ಚಾಕುಗಳನ್ನು ಅಡುಗೆಮನೆಯಲ್ಲಿ ಇಟ್ಟುಕೊಂಡರೆ ಅಡುಗೆ ಅನುಭವ ಸುಲಭವಾಗುತ್ತದೆ.