ಟೊಮೆಟೊ ಭಾರತೀಯ ಅಡುಗೆಯಲ್ಲಿ ಅತ್ಯಗತ್ಯವಾದ ತರಕಾರಿಗಳಲ್ಲಿ ಒಂದು. ಸಾಂಬಾರ್, ಪಲ್ಯ, ಗೊಜ್ಜು, ಚಟ್ನಿಯಂತಹ ರುಚಿಕರ ಅಡುಗೆಗಳಲ್ಲಿ ಟೊಮೆಟೊ ಪಾತ್ರ ಅಮೂಲ್ಯ. ಜೊತೆಗೆ ಸಲಾಡ್, ಪಿಜ್ಜಾ, ಬರ್ಗರ್ ಮತ್ತು ಸ್ಯಾಂಡ್‌ವಿಚ್‌ಗಳಲ್ಲೂ ಇದನ್ನು ಹೇರಳವಾಗಿ ಬಳಸಲಾಗುತ್ತದೆ. ಆದರೆ ಟೊಮೆಟೊ ಶೇಖರಿಸುವುದು ದೊಡ್ಡ ಸವಾಲು. ಹೆಚ್ಚು ತೇವಾಂಶ ಹೊಂದಿರುವ ಈ ತರಕಾರಿಯನ್ನು ಒಟ್ಟಾರೆ ಸಂಗ್ರಹಿಸಿದರೆ ಬೇಗನೆ ಹಾಳಾಗಬಹುದು.
ಟೊಮೆಟೊಗಳನ್ನು ಮಾರುಕಟ್ಟೆಯಿಂದ ತಂದ ನಂತರ ತಕ್ಷಣವೇ ತೊಳೆಯುವುದು ತಪ್ಪು. ತೊಳೆಯುವುದಾದರೆ ಚೆನ್ನಾಗಿ ಒರಸಿದ ನಂತರ ಮಾತ್ರ ಫ್ರಿಜ್‌ನಲ್ಲಿ ಇಡಬೇಕು. ತೇವಾಂಶ ಉಳಿದಿದ್ದರೆ ಅವು ಶೀಘ್ರ ಕೊಳೆಯಬಹುದು. ಹಾಗೆಯೇ, ಇತರ ತರಕಾರಿಗಳ ಜೊತೆಗೆ ಟೊಮೆಟೊ ಇಡುವುದನ್ನು ತಪ್ಪಿಸಬೇಕು. ಇತರ ತರಕಾರಿ ಅಥವಾ ಹಣ್ಣುಗಳ ತೂಕದಿಂದ ಟೊಮೆಟೊ ಕೊಳೆತು ಹೋಗಬಹುದು.
ಫ್ರಿಜ್‌ನಲ್ಲಿ ಇಡಬೇಕಾದರೆ ಪೇಪರ್‌ನಲ್ಲಿ ಸುತ್ತಿ ಇರಿಸಿ. ಇದು ತೇವಾಂಶವು ಶುಷ್ಕವಾಗಿದ್ದು ಟೊಮೆಟೊಗಳನ್ನು ಹೆಚ್ಚು ದಿನಗಳವರೆಗೆ ತಾಜಾತನದಿಂದ ಇಡುವಲ್ಲಿ ಸಹಾಯ ಮಾಡುತ್ತದೆ. ಪ್ಲಾಸ್ಟಿಕ್ ಚೀಲಗಳಲ್ಲಿ ಇಡುವುದನ್ನು ಸಂಪೂರ್ಣವಾಗಿ ತಪ್ಪಿಸಿ. ಬದಲಿಗೆ ಗಾಳಿಯಾಡದ ಕಂಟೇನರ್ ಅಥವಾ ಬುಟ್ಟಿಯಲ್ಲಿ ಇಡುವುದು ಉತ್ತಮ.
ಅರಿಶಿನ ನೀರಿನಲ್ಲಿ ತೊಳೆದು ಒಣಗಿಸಿ ಶೇಖರಿಸುವ ಅಭ್ಯಾಸವೂ ಉತ್ತಮ. ಟೊಮೆಟೊಗಳನ್ನು ಕಾಂಡದ ಭಾಗವನ್ನು ಕೆಳಗೆ ಇಟ್ಟು ಸಂಗ್ರಹಿಸಿದರೆ ಹೆಚ್ಚು ದಿನ ಫ್ರೆಶ್ ಆಗಿರುತ್ತವೆ. ಉಳಿದಂತೆ ಹಣ್ಣಾಗಿರುವ ಟೊಮೆಟೊಗಳನ್ನು ಪ್ಯೂರಿಯಾಗಿ ತಯಾರಿಸಿ ಫ್ರಿಡ್ಜ್‌ನಲ್ಲಿ ಇಡಬಹುದು. ಈ ರೀತಿ ಮಾಡಿದರೆ ತಿಂಗಳವರೆಗೂ ಬಳಸಬಹುದಾಗಿದೆ.
ಅಡುಗೆಗೆ ಬಳಸುವಾಗ ಹೆಚ್ಚು ಹಣ್ಣಾಗಿರುವ ಟೊಮೆಟೋವನ್ನು ಮೊದಲು ಬಳಸಿ. ಮಾಗಿದ ಟೊಮೆಟೊಗಳಿದ್ದರೆ ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡಿ.