Monday, December 29, 2025

ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಆಲ್‌ರೌಂಡರ್ ಡೌಗ್ ಬ್ರೇಸ್‌ವೆಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ಕ್ರಿಕೆಟ್‌ನ ಅನುಭವಿ ಆಲ್‌ರೌಂಡರ್ ಡೌಗ್ ಬ್ರೇಸ್‌ವೆಲ್ ತಮ್ಮ ವೃತ್ತಿಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಸುಮಾರು 18 ವರ್ಷಗಳ ಕಾಲ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದ 35 ವರ್ಷದ ಬ್ರೇಸ್‌ವೆಲ್, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಕಿವೀಸ್ ಪರ ಡೌಗ್ ಬ್ರೇಸ್‌ವೆಲ್ 28 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, ಈ ಅವಧಿಯಲ್ಲಿ 568 ರನ್ ಗಳಿಸುವ ಜೊತೆಗೆ 74 ವಿಕೆಟ್‌ಗಳನ್ನು ಕಬಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 21 ಪಂದ್ಯಗಳಲ್ಲಿ 221 ರನ್ ಹಾಗೂ 26 ವಿಕೆಟ್ ಪಡೆದು ತಂಡದ ಸಮತೋಲನಕ್ಕೆ ನೆರವಾಗಿದ್ದರು. ಟಿ20 ಕ್ರಿಕೆಟ್‌ನಲ್ಲೂ 20 ಪಂದ್ಯಗಳಲ್ಲಿ 126 ರನ್ ಹಾಗೂ 20 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡು ಉಪಯುಕ್ತ ಆಟಗಾರನಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ:

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಹೊರತಾಗಿ, 2012ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಅವರು ಕಾಣಿಸಿಕೊಂಡಿದ್ದರು. ಡೆಲ್ಲಿ ತಂಡದ ಪರ ಆಡಿದ ಏಕೈಕ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲೂ ಬ್ರೇಸ್‌ವೆಲ್ ಭಾಗವಹಿಸಿದ್ದರು.

error: Content is protected !!