ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ KKRನ ಅತಿ ದೊಡ್ಡ ಗೆಲುವಿನ ಅಂತರದ ದಾಖಲೆಯನ್ನು RCB ತಂಡ ಇದೀಗ ಬ್ರೇಕ್ ಮಾಡಿದೆ. ಈ ಮೂಲಕ ಐಪಿಎಲ್‌ನಲ್ಲಿ ನಯಾ ಇತಿಹಾಸ ಸೃಷ್ಟಿಸಿದೆ.
ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. PBKS ನೀಡಿದ 102 ರನ್‌ಗಳ ಸಾಧಾರಣ ಗುರಿಯನ್ನು ಆರ್‌ಸಿಬಿ 10 ಓವರ್‌ನಲ್ಲೇ ಮುಗಿಸಿ ಪಂದ್ಯದಲ್ಲಿ ಜಯ ಸಾಧಿಸಿದೆ.
60 ಎಸೆತಗಳ ಭಾರಿ ಅಂತರದ ಗೆಲುವು, ಐಪಿಎಲ್ ಪ್ಲೇಆಫ್/ನಾಕೌಟ್ ಪಂದ್ಯಗಳಲ್ಲಿ ಬೆನ್ನಟ್ಟುವಾಗ ಸಾಧಿಸಿದ ಅತಿದೊಡ್ಡ ಜಯ ಅಂತರವಾಗಿದೆ. 2024 ರ ಐಪಿಎಲ್ ಫೈನಲ್‌ನಲ್ಲಿ SRH ವಿರುದ್ಧ KKR 57 ಎಸೆತಗಳ ಅಂತರದಲ್ಲಿ ಗುರಿ ಮುಟ್ಟಿ ಗೆದ್ದಿತ್ತು. ಆ ದಾಖಲೆಯನ್ನುಇದೀಗ RCB ಮುರಿದಿದೆ.