ಹೊಸದಿಗಂತ ವರದಿ ಕಲಬುರಗಿ:
ಮಹಾರಾಷ್ಟ್ರದಲ್ಲಿ ಮೀಸಲಾತಿ ಕುರಿತಾಗಿ ಹೋರಾಟಗಳು ನಡೆಯುತ್ತಿದ್ದು, ಸೋಮವಾರ ತಡರಾತ್ರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಬಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಉಮರ್ಗಾ ಪೋಲಿಸ್ ಠಾಣೆಯಲ್ಲಿ 10ಕ್ಕೂ ಅಧಿಕ ಜನರ ವಿರುದ್ಧ ದೂರು ದಾಖಲಾಗಿದೆ.
ಮರಾಠಿ ಪುಂಡರಿಂದ ಕರ್ನಾಟಕ ಸಾರಿಗೆ ಬಸ್ ಗೆ ಬೆಂಕಿ ಹಚ್ಚಿದ ಘಟನೆ ಕುರಿತು ನಮ್ಮ ಬೀದರ್ ಜಿಲ್ಲೆಯ ಭಾಲ್ಕಿ ಘಟಕದ ಸಾರಿಗೆ ಸಿಬ್ಬಂದಿ ಅನೀಲ ದೂರು ನೀಡಿದ್ದು, ಇದೀಗ ದೂರು ದಾಖಲಾಗಿದೆ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪಾ ಹೇಳಿದ್ದಾರೆ.
ಇನ್ನೂ ಘಟನೆಯ ವಿಡಿಯೋ ಆಧರಿಸಿ ಇನ್ನೂ ಹಲವರ ವಿರುದ್ಧ ದೂರು ದಾಖಲಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.