ಲೋಕಾಯುಕ್ತ ಬಲೆಗೆ ಬಿದ್ದ ಕೆಕೆಆರ್‌ಟಿಸಿ ವಿಜಯನಗರ ವಿಭಾಗಾಧಿಕಾರಿ

ಹೊಸದಿಗಂತ ವರದಿ,ವಿಜಯನಗರ:

ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನಿಂದ ಲಂಚ ಸ್ವೀಕರಿಸುತ್ತಿದ್ದ ಕೆಕೆಆರ್‌ಟಿಸಿ ವಿಜಯನಗರ ವಿಭಾಗಾಧಿಕಾರಿ ವಿ.ಎಸ್.ಜಗದೀಶ್ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕರ್ತವ್ಯ ಲೋಪ ಪ್ರಕರಣವೊಂದಕ್ಕೆ ಸಂಬಂಧಿಸಿ ಇಲಾಖೆ ವಿಚಾರಣೆಯನ್ನು ಕೈಬಿಡಲು ಒಟ್ಟು ೨೫ ಸಾವಿರ ರೂ. ಗೆ ಬೇಡಿಕೆಯಿಟ್ಟಿದ್ದು, ೫ ಸಾವಿರ ರೂ. ಮುಂಗಡವಾಗಿ ಪಡೆದಿದ್ದರು. ಬುಧವಾರ ಸಂಜೆ ೭ ಗಂಟೆ ಸುಮಾರಿಗೆ ಹೊಸಪೇಟೆ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿರುವ ತಮ್ಮ ಕೊಠಡಿಯಲ್ಲಿ ಇನ್ನುಳಿದ ೨೦ ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಯುಕ್ತರು ದಾಳಿ ನಡೆಸಿದ್ದಾರೆ. ನಗದು ಸಮೇತ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದ್ದಾರೆ.
ಲೋಕಾಯಕ್ತ ಡಿಎಸ್ಪಿ ಶೀಲವಂತ ಹೊಸಮನಿ ನೇತೃತ್ವದಲ್ಲಿ ನಡೆದ ದಾಳಿ ನಡೆದಿದೆ ಎಂದು ಲೋಕಾಯುಕ್ತ ಎಸ್ಪಿ ಸಿದ್ಧರಾಜು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!