ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಕ್ರಿಕೆಟರ್, ಕನ್ನಡಿಗ ಕೆಎಲ್ ರಾಹುಲ್ ನಿನ್ನೆಯಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
ಲಖ್ನೋ ಸೂಪರ್ ಜೈಂಟ್ಸ್ ಟೀಮ್‌ನ್ನು ಮುನ್ನಡೆಸುತ್ತಿರುವ ರಾಹುಲ್ ತಮ್ಮ ಟೀಂ ಜೊತೆ ಬರ್ಥ್‌ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರು ಕೇಕ್ನಲ್ಲೇ ಮಿಂದೆದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಖ್ನೋ ಸೂಪರ್ ಜೈಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ರಾಹುಲ್ಗಾಗಿ ನಾನಾ ರೀತಿಯ ಕೇಕ್ಗಳನ್ನು ಇಡಲಾಗಿತ್ತು. ಸಿಂಪಲ್ ಆಗಿ ಆಗಮಿಸಿದ ಅವರು ಇತರ ಆಟಗಾರರ ಜೊತೆ ಕೇಕ್ ಕತ್ತರಿಸಿದರು. ಈ ವೇಳೆ ಎಲ್ಲರೂ ರಾಹುಲ್ ಮುಖಕ್ಕೆ ಕೇಕ್ ಹಚ್ಚೋಕೆ ಆರಂಭಿಸಿದರು. ಆ ಬಳಿಕ ರಾಹುಲ್ ಶರ್ಟ್ ತೆಗೆಯುತ್ತಿದ್ದಂತೆ ಅವರ ಮೈಗೆಲ್ಲ ಕೇಕ್ ಮೆತ್ತಲಾಗಿದೆ.
Someone asked for the full video? 😂💙 https://t.co/nyKJGTpSBR pic.twitter.com/GwcanzVWAf
— Lucknow Super Giants (@LucknowIPL) April 18, 2024