JOB| ಬೆಳಗಾವಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ 46 ಹುದ್ದೆಗಳ ನೇಮಕಾತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಳಗಾವಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ 46 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಕ ವ್ಯವಸ್ಥಾಪಕರು, ತಾಂತ್ರಿಕ ಅಧಿಕಾರಿ, ವಿಸ್ತರಣಾಧಿಕಾರಿ, ಆಡಳಿತ ಸಹಾಯಕ, ಲೆಕ್ಕ ಸಹಾಯಕ, ಮಾರುಕಟ್ಟೆ ಸಹಾಯಕ, ಕೆಮಿಸ್ಟ್‌ ದರ್ಜೆ, ಕಿರಿಯ ಸಿಸ್ಟಂ ಆಪರೇಟರ್‌ ಮತ್ತು ಕಿರಿಯ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ನೇಮಕಾತಿ ನಿಯಮಾನುಸಾರ ವಿದ್ಯಾರ್ಹತೆ ಜೊತೆಗೆ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 33,450/- ರಿಂದ 97,100/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಸೆಪ್ಟೆಂಬರ್‌ 26,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!